ADVERTISEMENT

ತಗ್ಗಿಕುಪ್ಪೆ ಗ್ರಾ.ಪಂ. ಅಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 6:45 IST
Last Updated 9 ನವೆಂಬರ್ 2021, 6:45 IST
ಮಾಗಡಿ ತಾಲ್ಲೂಕಿನ ತಗ್ಗಿಕುಪ್ಪೆ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆಶಾ ಮಂಜುನಾಥ್‌ ಅವರನ್ನು ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ, ತಾಲ್ಲೂಕು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್‌ ಹಾಗೂ ಉಪಾಧ್ಯಕ್ಷ ಎಚ್‌.ಎಂ. ರಂಗನಾಥ್‌ ಹಾಗೂ ಸದಸ್ಯರು ಅಭಿನಂದಿಸಿದರು

ಮಾಗಡಿ: ತಾಲ್ಲೂಕಿನ ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಶಾ ಮಂಜುನಾಥ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿದ್ದ ರಂಗಮ್ಮ ಗಂಗಯ್ಯ ಅವರ ಅವಧಿ ಪೂರೈಸಿದ್ದ ಹಿನ್ನೆಲೆಯಲ್ಲಿ ಸೋಮವಾರ ಚುನಾವಣೆ
ನಡೆಯಿತು.

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ, ಉಪಾಧ್ಯಕ್ಷ ಎಚ್‌.ಎಂ. ರಂಗನಾಥ್‌, ಸದಸ್ಯರಾದ ಟಿ.ಎಚ್‌. ರಾಮಯ್ಯ, ರಾಮಚಂದ್ರಯ್ಯ, ದೇವರಾಜಮ್ಮ ಎಂ.ಆರ್‌. ಮುಕುಂದ, ಭಾಗ್ಯಮ್ಮ ನರಸಿಂಹಯ್ಯ, ಮಹಂತಯ್ಯ, ಮಂಜುಳಾ ಮಂಜುನಾಥ್‌, ಹುಚ್ಚಮ್ಮ, ರಾಮಕೃಷ್ಣ, ಕೃಷ್ಣ, ಜಯಮ್ಮ ಗಂಗಾಧರ, ಹನುಮಂತರಾಯಪ್ಪ, ನಾಗರತ್ನಮ್ಮ ನರಸಿಂಹಮೂರ್ತಿ, ರುದ್ರಾರಾಧ್ಯ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ADVERTISEMENT

ಪಿಡಿಒ ನಾಗರಾಜು ಜಿ., ಕಾರ್ಯದರ್ಶಿ ಲಿಂಗಮೂರ್ತಿ, ದ್ವಿತೀಯ ದರ್ಜೆ ಸಹಾಯಕ ರೇವಣಸಿದ್ದಯ್ಯ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರಸ್ವಾಮಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.