ADVERTISEMENT

ಮೂಡಾ ಹಗರಣ | ಹುರುಳಿಲ್ಲ: ಮಾಜಿ ಸಚಿವ ಎಚ್.ಎಂ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 7:00 IST
Last Updated 29 ಆಗಸ್ಟ್ 2024, 7:00 IST
ಹೆಚ್.ಎಂ.ರೇವಣ್ಣ
ಹೆಚ್.ಎಂ.ರೇವಣ್ಣ   

ಮಾಗಡಿ: ಅಂದು ಹಿಂದುಳಿದ ವರ್ಗಗಳ ನಾಯಕರಾದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಮಾದರಿ ಆಡಳಿತವನ್ನು ಸಹಿಸದೇ ಅವರನ್ನು ಅಧಿಕಾರದಿಂದ ಇಳಿಸಲು ಷಢ್ಯಂತ್ರ ರೂಪಿಸಲಾಗಿತ್ತು. ಹಾಗೆಯೇ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಡಾ ಹಗರಣದಲ್ಲಿ ಸಿಲುಕಿಸುವ ಕುತಂತ್ರ ನಡೆಯುತ್ತಿದೆ. ಆದರೆ, ವಿರೋಧ ಪಕ್ಷದ ಈ ಪ್ರಯತ್ನ ಸಫಲವಾಗುವುದಿಲ್ಲ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ವಿಚಾರವಾಗಿ ವಿರೋಧ ಪಕ್ಷದವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ವಿರೋಧ ಪಕ್ಷದವರು ಜನಪರ ಆಡಳಿತ ನಡೆಸುತ್ತಿರುವ ಹಿಂದುಳಿದ ನಾಯಕ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕುವ ಹುನ್ನಾರ ಮಾಡುತ್ತಿದ್ದಾರೆ ಎಂದರು.

‘ದೇವೇಗೌಡರ ಕುಟುಂಬಕ್ಕೆ ಮುಡಾದಿಂದ 84 ನಿವೇಶನಗಳು ಹಂಚಿಕೆಯಾಗಿರುವ ಬಗ್ಗೆ ದಾಖಲೆಗಳಿವೆ. ಶೀಘ್ರದಲ್ಲೇ ದಾಖಲೆಗಳನ್ನು ಬಹಿರಂಗಪಡಿಸಲಾಗುತ್ತದೆ. ಇವತ್ತಲ್ಲ ನಾಳೆ ಕುಮಾರಸ್ವಾಮಿ ಜೈಲಿಗೆ ಹೋಗುವುದು ನಿಶ್ಚಿತ’ ಎಂದು ಅವರು ಹೇಳಿದರು.

ADVERTISEMENT

ಮುಖಂಡರಾದ ರಾಜೇಂದ್ರ ಪಾಲ್ ಸಿಂಗ್, ಶಿವರಾಮ್, ಪ್ರಗತಿಪರ ರೈತ ಕುಂಬಳಕಾಯಿ ಗಂಗಣ್ಣ, ಹೊಂಬಾಳಮ್ಮನಪೇಟೆ ತೇಜಸ್ ಕುಮಾರ್, ವಿಜಯ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.