ADVERTISEMENT

ಇಂದು ಶಾಲೆ ಆರಂಭ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 7:00 IST
Last Updated 25 ಅಕ್ಟೋಬರ್ 2021, 7:00 IST
ಬಿಡದಿಯ ಸರ್ಕಾರಿ ಶಾಲೆ ಶುಚಿತ್ವಗೊಳಿಸಿ ಆರಂಭಕ್ಕೆ ಸಿದ್ದಗೊಂಡಿರುವುದು
ಬಿಡದಿಯ ಸರ್ಕಾರಿ ಶಾಲೆ ಶುಚಿತ್ವಗೊಳಿಸಿ ಆರಂಭಕ್ಕೆ ಸಿದ್ದಗೊಂಡಿರುವುದು   

ಬಿಡದಿ: ಕೋವಿಡ್‌ನಿಂದಾಗಿ ಸುಮಾರು 18 ತಿಂಗಳಿನಿಂದ ಸ್ಥಗಿತಗೊಂಡಿದ್ದ ಪ್ರಾಥಮಿಕ ಶಾಲೆಗಳು ಸೋಮವಾರದಿಂದ ಕಾರ್ಯಾರಂಭ ಮಾಡಲಿವೆ.

ಈ ಹಿನ್ನೆಲೆಯಲ್ಲಿ ಹೋಬಳಿಯ ಎಲ್ಲಾ ಶಾಲಾ ಕಟ್ಟಡಗಳನ್ನು ಶನಿವಾರ ಸ್ಯಾನಿಟೈಜ್‌ ಮಾಡಲಾಯಿತು. ಶೌಚಾಲಯಗಳನ್ನು ಶುಚಿತ್ವಗೊಳಿಸಿ ಸರ್ಕಾರದ ಸುತ್ತೋಲೆಯ ಸಿದ್ಧತೆ ಕೈಗೊಳ್ಳಲಾಗಿದೆ.

ಪ್ರತಿ ವಿದ್ಯಾರ್ಥಿಯೂ ಪೋಷಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯ. ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾಸ್ಕ್ ಧರಿಸಬೇಕು. ಮಕ್ಕಳಿಗೆ ಪೋಷಕರ ಮೂಲಕ ಮಾಹಿತಿ ನೀಡಲಾಗಿದೆ. ಶಿಕ್ಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು. 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್‌ಶೀಲ್ಡ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.

ADVERTISEMENT

1ರಿಂದ 5ನೇ ತರಗತಿವರೆಗೆ ಒಂದು ವಾರಗಳ ಕಾಲ ಅರ್ಧ ದಿನ ಮಾತ್ರ ಶಾಲೆ ನಡೆಸಲಾಗುತ್ತದೆ. ನ. 1ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ ನಡೆಯುತ್ತದೆ. ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನೂ ಶಾಲೆಯಲ್ಲಿ ಮಾಡಲಾಗುತ್ತದೆ.ಒಂದು ಕೊಠಡಿಯಲ್ಲಿ 20 ಮಕ್ಕಳನ್ನು ಕೂರಿಸಿ ಪಾಠ ಮಾಡಲು ವ್ಯವಸ್ಥೆ ಮಾಡಲಾಗಿದೆ. ಶಾಲೆಯ ಪ್ರವೇಶ ದ್ವಾರದಲ್ಲಿಯೇ ತಪಾಸಣೆ ಮಾಡಲಾಗುತ್ತದೆ.

ಯಾವುದೇ ವಿದ್ಯಾರ್ಥಿಗಳಿಗೆ ಕೆಮ್ಮೆ, ನೆಗಡಿ, ಜ್ವರದ ಲಕ್ಷಣಗಳಿದ್ದರೆ ಅವರನ್ನು ಐಸೋಲೇಷನ್‌ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಇರಿಸಿ ಅವರ ಪಾಲಕರನ್ನು ಸಂಪರ್ಕಿಸಿ ಮನೆಗೆ ಕಳುಹಿಸಲಾಗುವುದು. ಈ ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಇಲ್ಲಿನ ಶಾಲೆಯ ಮುಖ್ಯಶಿಕ್ಷಕಿ ರುಕ್ಮಿಣಾಬಾಯಿ ಹೇಳಿದರು.

‘ಶಾಲೆಯಲ್ಲಿ 1 ರಿಂದ 8 ತರಗತಿಯವರೆಗೂ 269 ವಿದ್ಯಾರ್ಥಿಗಳಿದ್ದಾರೆ. ಎಲ್ಲರಿಗೂ ಮಾಸ್ಕ್, ಸ್ಯಾನಿಟೈಜರ್ ಮತ್ತು ಕುಡಿಯಲು ಬಿಸಿನೀರು ಒದಗಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.