ADVERTISEMENT

‘ಅಭಿವೃದ್ಧಿ ಕಾಣದ ಮಿನಿ ವಿಧಾನಸೌಧ ಮುಂಭಾಗ’

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 15:59 IST
Last Updated 19 ಆಗಸ್ಟ್ 2019, 15:59 IST
ಕನಕಪುರದಲ್ಲಿ ನೂತನವಾಗಿ ನಿರ್ಮಿಸಿರುವ ಮಿನಿ ವಿಧಾನಸೌಧ ರಸ್ತೆ ಕೆಸರುಮಯ ಸ್ಥಿತಿ
ಕನಕಪುರದಲ್ಲಿ ನೂತನವಾಗಿ ನಿರ್ಮಿಸಿರುವ ಮಿನಿ ವಿಧಾನಸೌಧ ರಸ್ತೆ ಕೆಸರುಮಯ ಸ್ಥಿತಿ   

ಕನಕಪುರ: ಮಿನಿ ವಿಧಾನಸೌಧದ ಮುಂಭಾಗದ ರಸ್ತೆ ಅಭಿವೃದ್ಧಿ ಕಾಣದೆ ಮಳೆಯಿಂದಾಗಿ ನೀರಿನ ಗುಂಡಿಗಳಾಗಿ ಮಾರ್ಪಟ್ಟಿವೆ. ಇದರಿಂದ ಜನರು ಓಡಾಡಲು ಪರದಾಡುವಂತಾಗಿದೆ.

ಅನೇಕ ಇಲಾಖೆಗಳ ಕಚೇರಿಗಳು ಒಂದೇ ಕಡೆ ಕಾರ್ಯನಿರ್ವಹಿಸುವಂತೆ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. ಬಹುತೇಕ ಕಚೇರಿಗಳು ಸ್ಥಳಾಂತರಗೊಂಡು ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ದಿನಕ್ಕೆ ಸಾವಿರಾರು ಜನರು ದಿನಲೂ ಭೇಟಿ ನೀಡುತ್ತಾರೆ. ಆದರೂ,ಮಿನಿ ವಿಧಾನಸೌಧ ಮುಂಭಾಗ ಯಾವುದೇ ಅಭಿವೃದ್ಧಿ ಕಂಡಿಲ್ಲ. ಮಳೆ ಬಿದ್ದ ತಕ್ಷಣ ಕೆಸರು ಗುಂಡಿಯಂತಾಗಿದೆ ಎಂದು ಸ್ಥಳೀಯರಾದ ಜಿ.ಪಿ.ಕಾಡೇಗೌಡ ದೂರಿದ್ದಾರೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. ಕಟ್ಟಡ ಉದ್ಘಾಟನೆಗೂ ಮೊದಲೇ ರಸ್ತೆ ಮತ್ತು ಪಾರ್ಕಿಂಗ್‌ ಜಾಗ ಅಭಿವೃದ್ಧಿಪಡಿಸಬೇಕಿತ್ತು. ಇಲ್ಲವೇ ಕಚೇರಿಗಳು ಸ್ಥಳಾಂತರ ಗೊಳ್ಳುವ ಮೊದಲು ಮಿನಿ ವಿಧಾನಸೌಧ ಮುಂಭಾಗದ ಜಾಗ ಅಭಿವೃದ್ಧಿಪಡಿಸಬೇಕಿತ್ತು. ಯಾವುದನ್ನು ಮಾಡದೇ ವಿಳಂಬ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಸ್ಥಳೀಯರಾದ ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.