ADVERTISEMENT

ಮಳಗಾಳು ಗ್ರಾಮಕ್ಕೆ ಅಂಬೇಡ್ಕರ್ ಅಧ್ಯಯನ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 6:18 IST
Last Updated 30 ಜುಲೈ 2024, 6:18 IST
ಕನಕಪುರ ಮಳಗಾಳು ಗ್ರಾಮದ ಎಕೆ ಕಾಲೋನಿ ಗೆ ಭೇಟಿ ನೀಡಿದ ಅಂಬೇಡ್ಕರ್ ಅಧ್ಯಯನ ತಂಡದವರು ಸಂತ್ರಸ್ತರಿಂದ ಮಾಹಿತಿ ಪಡೆದುಕೊಂಡಿರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು
ಕನಕಪುರ ಮಳಗಾಳು ಗ್ರಾಮದ ಎಕೆ ಕಾಲೋನಿ ಗೆ ಭೇಟಿ ನೀಡಿದ ಅಂಬೇಡ್ಕರ್ ಅಧ್ಯಯನ ತಂಡದವರು ಸಂತ್ರಸ್ತರಿಂದ ಮಾಹಿತಿ ಪಡೆದುಕೊಂಡಿರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು   

ಕನಕಪುರ: ಪರಿಶಿಷ್ಟ ಜಾತಿ ವರ್ಗಗಳ ಮೇಲಿನ ದೌರ್ಜನ್ಯಕ್ಕೆ ಸಿಕ್ಕಿ ನಲುಗಿರುವ ಮಳಗಾಳು ಗ್ರಾಮಕ್ಕೆ ಬೆಂಗಳೂರು ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ವಕೀಲರ ತಂಡವು ಸೋಮವಾರ ಭೇಟಿ ನೀಡಿ ಗಾಯಾಳುಗಳು ಮತ್ತು ಕುಟುಂಬಸ್ಥರಿಂದ ಘಟನೆಯ ಮಾಹಿತಿ ಪಡೆದರು.

ಕುಟುಂಬಸ್ಥರೊಂದಿಗೆ ಮಾತನಾಡಿ ಅವರಿಂದ ಮಾಹಿತಿಯನ್ನು ಪಡೆದರು, ಇಷ್ಟೆಲ್ಲ ದೌರ್ಜನ್ಯಗಳು ಇಲ್ಲಿ ನಡೆಯುತ್ತಿದ್ದರೂ ಇದನ್ನು ದೌರ್ಜನ್ಯ ಪೀಡಿತ ಪ್ರದೇಶವೆಂದು ಘೋಷಣೆ ಮಾಡದಿರುವುದು ದುರದೃಷ್ಟಕರ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೌರ್ಜನ್ಯಕ್ಕೆ ತುತ್ತಾದ ಕುಟುಂಬದ ಸದಸ್ಯರು ತಮಗಾಗುತ್ತಿರುವ ನೋವು, ಮನೆಯ ವಾತಾವರಣ ಮತ್ತು ಪರಿಸ್ಥಿತಿಯ ಬಗ್ಗೆ ತಂಡಕ್ಕೆ ಮಾಹಿತಿ ನೀಡಿದರು.

ADVERTISEMENT

ಮಾನ್ವಿ, ಸಿದ್ದಾರ್ಥ್. ನಿಷ್ಕಲ, ಮಲ್ಲೇಶ್, ತಂಡದಲ್ಲಿದ್ದರು, ಧಮ್ಮ ದೀವಿಗೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.