ADVERTISEMENT

ಕನಕಪುರ | ಅನೀಶ್ ಕುಟುಂಬಕ್ಕೆ ದಲಿತ ಮುಖಂಡರ ಭೇಟಿ

ಅನೀಶ್ ಕುಟುಂಬಕ್ಕೆ ದಲಿತ ಮುಖಂಡರ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 6:17 IST
Last Updated 30 ಜುಲೈ 2024, 6:17 IST
ಕನಕಪುರ ಮಳೆಗಾಳು ಎಕೆ ಕಾಲೋನಿ ಗೆ ದಲಿತ ಮುಖಂಡರು ಭೇಟಿ ನೀಡಿ ಅನೀಶ್ ಕುಟುಂಬಕ್ಕೆ ಧೈರ್ಯ ತುಂಬಿದರು
ಕನಕಪುರ ಮಳೆಗಾಳು ಎಕೆ ಕಾಲೋನಿ ಗೆ ದಲಿತ ಮುಖಂಡರು ಭೇಟಿ ನೀಡಿ ಅನೀಶ್ ಕುಟುಂಬಕ್ಕೆ ಧೈರ್ಯ ತುಂಬಿದರು   

ಕನಕಪುರ: ರಾಮನಗರ ಜಿಲ್ಲೆಯ ದಲಿತ ಸಂಘಟನೆಗಳ ಮುಖಂಡರು ಭಾನುವಾರ ಕನಕಪುರ ಮಳಗಾಳು ಗ್ರಾಮಕ್ಕೆ ಭೇಟಿ ನೀಡಿ, ಹಲ್ಲೆಗೊಳಗಾಗಿ ಕೈ ಕಳೆದುಕೊಂಡ ಅನೀಶ್ ಪೋಷಕರಿಗೆ ಧೈರ್ಯ ತುಂಬಿದರು.

ಮಳಗಾಳು ಎಕೆ ಕಾಲೋನಿಯಲ್ಲಿ ಕೆಲವು ದಿನಗಳ ಹಿಂದೆ ರೌಡಿಗಳ ದಾಳಿಯಲ್ಲಿ ಅನೀಶ್ ಅವರ ಎಡಗೈ ತುಂಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ದೌರ್ಜನ್ಯವನ್ನು ಖಂಡಿಸಿ ರಾಮನಗರ ಜಿಲ್ಲೆಯ ಮಾಗಡಿ, ಚನ್ನಪಟ್ಟಣ, ರಾಮನಗರ, ಹಾರೋಹಳ್ಳಿ, ಕನಕಪುರದ ನೂರಕ್ಕೂ ಹೆಚ್ಚು ದಲಿತ ಮುಖಂಡರು ಮಳಗಾಳು ಗ್ರಾಮಕ್ಕೆ ಭೇಟಿ ನೀಡಿದ್ದರು.

ADVERTISEMENT

ಈ ವೇಳೆ ಸಮತಾ ಸೈನಿಕ ದಳದ ಜಿ.ಗೋವಿಂದಯ್ಯ, ರಾಮನಗರ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ, ಕನಕಪುರದ ಮಲ್ಲಿಕಾರ್ಜುನ್, ಶಿವಲಿಂಗಯ್ಯ, ಚನ್ನಪಟ್ಟಣದ ಶಿವರಾಮ್ ಸಂತ್ರಸ್ತರೊಂದಿಗೆ ಮಾತನಾಡಿ, ಆತ್ಮಸ್ಥೈರ್ಯ ತುಂಬಿದರು.

ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಗೃಹ ಸಚಿವರು ಈ ಘಟನೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು, ಕೈ ಕಳೆದುಕೊಂಡಿರುವ ಅನೀಶ್‌ಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.