ADVERTISEMENT

ಮತದಾರರ ಪಟ್ಟಿ: ಮ್ಯಾಪಿಂಗ್‌ಗೆ ರಾಮನಗರ ಹೆಚ್ಚುವರಿ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 5:55 IST
Last Updated 4 ಜನವರಿ 2026, 5:55 IST
<div class="paragraphs"><p>ಮತದಾರರ ಪಟ್ಟಿ</p></div>

ಮತದಾರರ ಪಟ್ಟಿ

   

ಕೃಪೆ:ಪಿಟಿಐ

ರಾಮನಗರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, 2002ನೇ ಸಾಲಿನ ಮತದಾರ ಪಟ್ಟಿಯನ್ನು 2025ರ ಮತದಾರಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಈ ಬಗ್ಗೆ 2002ರ ನಂತರ ಮದುವೆಯಾಗಿ ಬಂದವರು ಅಥವಾ ಸ್ಥಳಾಂತರಗೊಂಡವರು/ಹೊಸದಾಗಿ ಸೇರ್ಪಡೆಯಾದವರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ (ಬಿಎಲ್‌ಒ) ಮತಗಟ್ಟೆ ಮಟ್ಟದ ಅಧಿಕಾರಿಗಳ ಮುಖಾಂತರ ಮ್ಯಾಪಿಂಗ್ ಮಾಡಿಕೊಳ್ಳಬೇಕು.

ADVERTISEMENT


ತಾವು ಹಿಂದೆ ವಾಸ್ತವ್ಯವಿದ್ದ ತಮ್ಮ ಹಿಂದಿನ ವಿಧಾನಸಭಾ ಕ್ಷೇತ್ರದ ನಂಬರ್, ಭಾಗ (ಬೂತ್) ಸಂಖ್ಯೆ ಹಾಗೂ ತಮ್ಮ ಕ್ರಮ ಸಂಖ್ಯೆಯನ್ನು ಒಂದು ವೇಳೆ ನಿಮ್ಮ ಹೆಸರು 2002 ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ನಿಮ್ಮ ತಂದೆ-ತಾಯಿಯ ಕ್ರಮ ಸಂಖ್ಯೆ ಅಥವಾ ಅಜ್ಜ– ಅಜ್ಜಿಯ ಕ್ರಮ ಸಂಖ್ಯೆಯೊಂದಿಗೆ ಮಾಹಿತಿಯನ್ನು ಸಂಬಂಧಪಟ್ಟ ಬಿಎಲ್‌ಒ (ಮತಗಟ್ಟೆ ಮಟ್ಟದ ಅಧಿಕಾರಿ) ಅವರಲ್ಲಿ ನೀಡಿ ಮ್ಯಾಪಿಂಗ್ ಮಾಡಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗೆ 2002ರ ಮತದಾರರ ಪಟ್ಟಿ ಲಿಂಕ್: https://ceo.karnataka gov.in/363/electoral-roll--2002/en ಗಮನಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.