ADVERTISEMENT

ರಾಮನಗರ | ಜಯಪುರ ಗೇಟ್ ನಲ್ಲಿ ವಾರದ ಸಂತೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 2:30 IST
Last Updated 22 ನವೆಂಬರ್ 2025, 2:30 IST
ರಾಮನಗರ ತಾಲ್ಲೂಕಿನ ಜಯಪುರ ಗೇಟ್ ನಲ್ಲಿ ಹೊಸದಾಗಿ ಆರಂಭವಾಗಿರುವ ಮುತ್ತುರಾಯಸ್ವಾಮಿ ರೈತರ ವಾರದ ಸಂತೆ
ರಾಮನಗರ ತಾಲ್ಲೂಕಿನ ಜಯಪುರ ಗೇಟ್ ನಲ್ಲಿ ಹೊಸದಾಗಿ ಆರಂಭವಾಗಿರುವ ಮುತ್ತುರಾಯಸ್ವಾಮಿ ರೈತರ ವಾರದ ಸಂತೆ   

ರಾಮನಗರ: ಬಿಳಗುಂಬ ಗ್ರಾ.ಪಂ ವ್ಯಾಪ್ತಿಯ ಜಯಪುರ ಗೇಟ್‌ನಲ್ಲಿ ಮುತ್ತುರಾಯಸ್ವಾಮಿ ರೈತರ ವಾರದ ಸಂತೆ ಆರಂಭಗೊಂಡಿತು.

ಪ್ರತಿ ಬುಧವಾರ ನಡೆಯಲಿರುವ ಸಂತೆಯಲ್ಲಿ ಕುರಿ, ಮೇಕೆ, ನಾಟಿ ಕೋಳಿ, ದಿನಸಿ ಪದಾರ್ಥ, ಹೂ-ಹಣ್ಣು, ತರಕಾರಿ, ರೈತ ಸಲಕರಣೆ ಸಿಗಲಿದೆ. ಸಂತೆ ಬೆಳಗ್ಗೆ 6ಕ್ಕೆ ಆರಂಭವಾಗಲಿದೆ. ರೈತರೇ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು.

ಈ ಭಾಗದ ರೈತರಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದಲೇ ಸಂತೆ ನಡೆಸಲಾಗುತ್ತಿದೆ. ಈ ಸಂತೆಗೆ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.