ADVERTISEMENT

ಚನ್ನಮಾನಹಳ್ಳಿ ಗ್ರಾಮದಲ್ಲಿ ಓಡಾಡಿದ ಕಾಡಾನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 21:39 IST
Last Updated 30 ಜನವರಿ 2026, 21:39 IST
<div class="paragraphs"><p>ಚನ್ನಮಾನಹಳ್ಳಿ ಗ್ರಾಮದಲ್ಲಿ ಮಧ್ಯರಾತ್ರಿ ಕಾಣಿಸಿಕೊಂಡ ಕಾಡಾನೆ</p></div>

ಚನ್ನಮಾನಹಳ್ಳಿ ಗ್ರಾಮದಲ್ಲಿ ಮಧ್ಯರಾತ್ರಿ ಕಾಣಿಸಿಕೊಂಡ ಕಾಡಾನೆ

   

ರಾಮನಗರ: ತಾಲ್ಲೂಕಿನ ಚನ್ನಮಾನ ಹಳ್ಳಿ ಗ್ರಾಮದಲ್ಲಿ ಕಾಡಾನೆಯೊಂದು ಮಧ್ಯರಾತ್ರಿ ಓಡಾಡಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಆಹಾರ ಅರಸಿ ರಾತ್ರಿ ಬಂದಿರುವ ಕಾಡಾನೆಯು ಮನೆಗಳ ಸುತ್ತಮುತ್ತ ಶಬ್ದ ಮಾಡುತ್ತಿತ್ತು. ಎಚ್ಚರಗೊಂಡ ಜನ ಹೊರಕ್ಕೆ ಬಂದು ನೋಡಿದಾಗ ಕಾಡಾನೆ ಬಂದಿರುವುದು ಗೊತ್ತಾಗಿದೆ.

ಕೂಡಲೇ ಅರಣ್ಯ ಇಲಾಖೆಯ ಆನೆ ಕಾರ್ಯಾಪಡೆಯ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಕಾರ್ಯಪಡೆ ಸಿಬ್ಬಂದಿ ಆನೆಯನ್ನು ಗ್ರಾಮದಿಂದ ಅರಣ್ಯದ ಕಡೆಗೆ ಓಡಿಸುವ ಕಾರ್ಯಾಚರಣೆ
ಕೈಗೊಂಡರು.

ADVERTISEMENT

ತಾಲ್ಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯಕ್ಕೆ ಬಂದಿದ್ದ ಮೂರು ಕಾಡಾನೆಗಳ ಪೈಕಿ, ಒಂದು ಕಾಡಾನೆಯು ಚನ್ನಮಾನಹಳ್ಳಿ ಕಡೆಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸಿಬ್ಬಂದಿ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿ ಆನೆಯನ್ನು ಮರಳಿ ಕಾಡಿಗೆ ಓಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.