ಚನ್ನಪಟ್ಟಣ: ತಾಲ್ಲೂಕಿನ ಕುಂಟನದೊಡ್ಡಿ ಗ್ರಾಮದಲ್ಲಿ ಗುರುವಾರ ಮನೆ ಮೇಲೆ ಬಟ್ಟೆ ಒಣಗಿ ಹಾಕುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಾಗಿ ಗೃಹಿಣಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಶಿವಮ್ಮ (45) ಮೃತಪಟ್ಟವರು. ಗ್ರಾಮದ ಮಾದಯ್ಯ ಎಂಬುವರ ಪತ್ನಿ. ಮನೆ ಮೇಲ್ಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಬುಧವಾರ ರಾತ್ರಿ ಬೀಸಿದ ಗಾಳಿಗೆ ಕಡಿದು ಬಿದ್ದಿದೆ. ಇದನ್ನು ಗಮನಿಸದೆ ಶಿವಮ್ಮ ತಂತಿ ಮುಟ್ಟಿದಾಗ ವಿದ್ಯುತ್ ಹರಿದಿದೆ.
ಅವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.