ADVERTISEMENT

ಎಲ್ಲ ಕ್ಷೇತ್ರದಲ್ಲೂ ಮಹಿಳೆ ಮುಂಚೂಣಿ: ಮಾಲತಿ ಹೊಳ್ಳ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:15 IST
Last Updated 8 ಡಿಸೆಂಬರ್ 2019, 20:15 IST
ಗ್ರೀನ್‌ ಬೆಲ್‌ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾಲತಿ ಕೃಷ್ಣಮೂರ್ತಿ ಹೊಳ್ಳ ಮಾತನಾಡಿದರು
ಗ್ರೀನ್‌ ಬೆಲ್‌ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾಲತಿ ಕೃಷ್ಣಮೂರ್ತಿ ಹೊಳ್ಳ ಮಾತನಾಡಿದರು   

ಹಾರೋಹಳ್ಳಿ (ಕನಕಪುರ): ಸಮಾಜದಲ್ಲಿ ಗಂಡು – ಹೆಣ್ಣು ಎಂಬ ಬೇಧ ಭಾವ ಸಲ್ಲದು ಎಂದು ಪ್ಯಾರಾ ಅಥ್ಲೆಟಿಕ್‌ ಸ್ಪರ್ಧಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾಲತಿ ಕೃಷ್ಣಮೂರ್ತಿ ಹೊಳ್ಳ ಅಭಿಪ್ರಾಯಪಟ್ಟರು.

ಇಲ್ಲಿನ ಹಾರೋಹಳ್ಳಿ ಹೋಬಳಿ ಮೇಡಮಾರನಹಳ್ಳಿ ಬಳಿಯಿರುವ ಗ್ರೀನ್‌ ಬೆಲ್‌ ಹೈಶಾಲೆ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮಹಿಳಾ ಜಾಗೃತಿಗಾಗಿ ಹಮ್ಮಿಕೊಂಡಿದ್ದ 'ಉಡಾನ್‌' ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಯಾರು ಅಶಕ್ತರೆಂದು ಭಾವಿಸಕೂಡದು. ಸಿಗುವ ಅವಕಾಶ ಸಮರ್ಥವಾಗಿ ನಿಭಾಯಿಸಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ADVERTISEMENT

ಪ್ರಾಂಶುಪಾಲರಾದ ಜೆ.ಉಮಾದೇವಿ ಮಾತನಾಡಿ, ದೇಶದಲ್ಲಿ ಮಹಿಳೆಗೆ ಕೊಟ್ಟಿರುವಷ್ಟು ಸ್ವಾತಂತ್ರ‍್ಯ ಮತ್ತು ಸ್ಥಾನಮಾನ ಯಾವ ದೇಶವೂ ಕೊಟ್ಟಿಲ್ಲ ಎಂದು ಅಭಿಪ್ರಾಯಪಟ್ಟರು.

ಅನಾದಿ ಕಾಲದಿಂದ ಇಲ್ಲಿಯವರೆಗೂ ಮಹಿಳೆ ಮುಂಚೂಣಿ ಸ್ಥಾನದಲ್ಲಿದ್ದಾರೆ. ಸಮಾಜ ಕಟ್ಟುವ, ಕುಟುಂಬ ಮುನ್ನೆಡೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಅಂಜುಂ, ನಿರ್ದೇಶಕ ಅಯೂಬ್‌ಖಾನ್‌, ಉಪ ನಿರ್ದೇಶಕ ಸೈಪುಲ್ಲಾ ವಸಿಂ ಖಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.