ADVERTISEMENT

ಮಹಿಳೆ ಸ್ನಾನ ಮಾಡುತ್ತಿರುವುದನ್ನು ಚಿತ್ರೀಕರಿಸಿದ್ದ ಯುವಕನ ಸೆರೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2023, 15:44 IST
Last Updated 25 ಸೆಪ್ಟೆಂಬರ್ 2023, 15:44 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ಕನಕಪುರ: ಮಹಿಳೆಯೊಬ್ಬರು ಸ್ನಾನ ಮಾಡುವಾಗ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಕನಕಪುರದ ಬಸವೇಶ್ವರ ನಗರಲ್ಲಿ ಭಾನುವಾರ ನಡೆದಿದೆ. 

ಬಸವೇಶ್ವರ ನಗರದ ನಿತಿನ್ (22) ಬಂಧಿತ ಆರೋಪಿ.  ಘಟನೆ ಸಂಬಂಧ ಮಹಿಳೆಯು ಟೌನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಯುವಕ, ಮಹಿಳೆಯ ನೆರೆಮನೆಯಲ್ಲಿ ವಾಸವಾಗಿದ್ದಾನೆ ಮಹಿಳೆ ವಾಸವಿರುವ ಮನೆಯ ಸ್ನಾನದ ಕೋಣೆಯು ಯುವಕ ಮನೆಗೆ ಹೊಂದಿಕೊಂಡಂತೆ ಇದ್ದು ಯುವಕ ಕದ್ದು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ್ದಾನೆ. ಇದನ್ನು ಗಮನಿಸಿದ್ದ ಮಹಿಳೆ ತಕ್ಷಣವೇ ಕಿರುಚಿಕೊಂಡು ಕೋಣೆಯ ಕಿಟಕಿ ಮುಚ್ಚಿಕೊಂಡಿದ್ದರು. ಬಳಿಕ ತಮ್ಮ ಪೋಷಕರಿಗೆ ಘಟನೆಯ ಕುರಿತು ತಿಳಿಸಿದ್ದರು

ADVERTISEMENT

ಘಟನೆಯ ಕುರಿತು ಪೋಷಕರು ಯುವಕನ ಬಳಿ ಕೇಳಲು ಹೋದಾಗ ಆತನ ಪೋಷಕರು ಜಗಳಕ್ಕೆ ಬಂದಿದ್ದರು ಎಂದು ಮಹಿಳೆಯ ಸಹೋದರ ತಿಳಿಸಿದ್ದಾನೆ. 

ಟೌನ್‌ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಉಷಾ ನಂದಿನಿ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್‌ ಮಿಥುನ್‌ ಶಿಲ್ಪಿ ಆರೋಪಿ ಮತ್ತು ಆತನ ಮೊಬೈಲ್‌ನ್ನು ವಶಕ್ಕೆ ಪಡೆದುಕೊಂಡಿದ್ದು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.