ಭದ್ರಾವತಿ: `ಅನ್ನ ನೀಡುವ ಭೂಮಿ ನಂಬಿ ಬದುಕುತ್ತಿರುವ ಒಕ್ಕಲಿಗ ಸಮುದಾಯ ಇಂದು ಅನೇಕ ತಲ್ಲಣಗಳಿಗೆ ಒಳಗಾಗಿದೆ. ಇದರಿಂದ ಹೊರಬರಲು ಸಮುದಾಯಕ್ಕೆ ಹಿರಿಕರನ್ನು ಪರಿಚ ಯಿಸುವ ಅಗತ್ಯವಿದೆ' ಎಂದು ಹಂಪಿ ಕನ್ನಡ ವಿ.ವಿ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಹೇಳಿದರು.
ಇಲ್ಲಿನ ಎಂಪಿಎಂ ಕಲ್ಯಾಣ ಮಂಟಪದಲ್ಲಿ ಈಚೆಗೆ ಎಂಪಿಎಂ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡಿದರು.
ಕೆಂಪೇಗೌಡ ಕೇವಲ ಒಬ್ಬರಲ್ಲ ಮೂವರಿದ್ದರು, ಇಮ್ಮಡಿ ಮತ್ತು ಮಮ್ಮುಡಿ ಕೆಂಪೇಗೌಡರು ಬೆಂಗಳೂರು, ಮಾಗಡಿ, ಯಲಹಂಕ ನಗರ ನಿರ್ಮಿ ಸಿದರು. ವಿಜಯನಗರ ಸಾಮ್ರಾಜ್ಯ ಮಾದರಿಯಲ್ಲಿ ಬೆಂಗಳೂರು ನಗರ ನಿರ್ಮಿಸಿರು. ಕೆರೆ, ಕಾಲುವೆ ಕಟ್ಟಿ ವ್ಯವಸಾಯಕ್ಕೆ ಉತ್ತಮ ಅವಕಾಶ ನೀಡಿದರು ಎಂದರು.
ಇವರ ಕಾರ್ಯಕ್ಷೇತ್ರ ಕೇವಲ ಕೇವಲ ಕೃಷಿಗೆ ಸೀಮಿತವಾಗದೆ ಸಾಹಿತ್ಯ, ಶಿಲ್ಪಕಲೆ, ವಾಣಿಜ್ಯೋ ದ್ಯಮ ಕಡೆಗೂ ಅಡಿಪಾಯ ಹಾಕಿದರು. ಇದರ ಫಲ ಇಂದು ಬೆಂಗಳೂರು ವಿಶ್ವ ಮಟ್ಟದಲ್ಲಿ ಗುರುತಿಸಿ ಕೊಳ್ಳುತ್ತಿದೆ. ಇದು ಒಕ್ಕಲಿಗ ಸಮುದಾಯ ನಾಡಿಗೆ ನೀಡಿದ ಕೊಡುಗೆ ಎಂದು ವಿವರಿಸಿದರು.
ಶಾಸಕ ಎಂ.ಜೆ. ಅಪ್ಪಾಜಿ ಮಾತನಾಡಿ, `ಎಂಪಿಎಂ ಕಾರ್ಖಾನೆಗೆ ಐಪಿಎಸ್ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕನನ್ನಾಗಿ ಮಾಡುವ ಬದಲು ಐಎಎಸ್ ಅಧಿಕಾರಿ ನೇಮಿಸುವ ಅಗತ್ಯವಿದೆ ಎಂದು ಹೇಳಿದರು. ಈ ಕುರಿತು ಚಿಂತನೆ ನಡೆಸಿದ್ದು, ಕಾರ್ಖಾನೆ ವಿಚಾರವಾಗಿ ಈಗಾಗಲೇ ಸರ್ಕಾರದ ಮಂತ್ರಿಗಳ ಜತೆ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಸರ್ಕಾರದ ಅನುದಾನ ತರುವ ವಿಚಾರದಲ್ಲಿ ಯಾವುದೇ ರೀತಿಯ ಪಕ್ಷ ಹಾಗೂ ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.
ಬಿ.ಪಿ.ರವೀಂದ್ರನಾಥ್, ಬಿ.ಎನ್. ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂಪಿಎಂ ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
`ಡೆಂಗೆ: ಮುಂಜಾಗ್ರತೆ ಅವಶ್ಯ'
ರಿಪ್ಪನ್‌ಪೇಟೆ: ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಅಗತ್ಯ ಎಂದು ಆರೋಗ್ಯ ಇಲಾಖೆಯ ಹಿರಿಯ ಸಹಾಯಕ ಕೆ.ಆರ್. ಪ್ರಭಾಕರ ತಿಳಿಸಿದರು.
ಪಟ್ಟಣದ ಗ್ರಾಮ ಪಂಚಾಯ್ತಿ ಆವರಣದಲ್ಲಿ ಈಚೆಗೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಮಾರಕ ರೋಗಗಳ ತಡೆ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ತಕ್ಷಣ ಸ್ಥಳೀಯ ಸರ್ಕಾರಿ ವೈದ್ಯರಲ್ಲಿ ತೋರಿಸಬೇಕು. ಉಚಿತವಾಗಿ ಲಭ್ಯವಿರುವ ಮಾದರಿ ರಕ್ತ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್. ಚಂದ್ರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮದಲ್ಲಿ ಶುಚಿತ್ವ ಕಾಪಾಡದ ಹೊಟೇಲ್ ಅಂಗಡಿಗಳ ಲೈಸನ್ಸ್ ರದ್ದು ಮಾಡುವುದು ಅಲ್ಲದೆ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಮಾರಕ ರೋಗಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ಮುದ್ದು ಭಂಡಾರಿ, ಪಿಡಿಒ ಚಂದ್ರಶೇಖರ್ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.