ADVERTISEMENT

ಎನ್‌ಟಿಎಸ್‌ಇಗೆ ಉಚಿತ ಮಾಹಿತಿ ಮಾರ್ಗದರ್ಶನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 6:05 IST
Last Updated 2 ಜೂನ್ 2011, 6:05 IST

ಶಿವಮೊಗ್ಗ: ಎಂಟನೇ ತರಗತಿ ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದಾದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಗೆ (ಎನ್‌ಟಿಎಸ್‌ಇ) ಉಚಿತ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಜೂನ್ 5ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಗರದ ಶಿವಪ್ಪನಾಯಕ ಬಡಾವಣೆಯ ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದೆ.

ಹಾಸನದ ಜಿಮ್ಯಾಟ್ ಕಿಂಗ್ ಶಿವಕುಮಾರ್ ಈ ತರಬೇತಿ ನಡೆಸಿಕೊಡುವರು. ನವೆಂಬರ್‌ನಲ್ಲಿ ನಡೆಯುವ ಈ ಪರೀಕ್ಷೆಗೆ 2010-11ನೇ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಹಾಜರಾಗಬಹುದು ಎಂದು ಪ್ರಿಯದರ್ಶಿನಿ ಆಂಗ್ಲಪ್ರೌಢಶಾಲೆಯ ರಮೇಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತರಬೇತಿ ಪಡೆದು ಸಂದರ್ಶನದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಿಂಗಳಿಗೆ ್ಙ 500 ವಿದ್ಯಾರ್ಥಿವೇತನ ದೊರೆಯಲಿದೆ. ಇದು ವಿದ್ಯಾರ್ಥಿಯ ಉನ್ನತ ವ್ಯಾಸಂಗ ಮುಗಿಸುವವರೆಗೂ ಸಿಗುತ್ತದೆ ಎಂದರು.

5ರಂದು ನಡೆಯಲಿರುವ ಶಿಬಿರದಲ್ಲಿ ಪ್ರೌಢಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಳ್ಳಬಹುದು. ಅದೇ ದಿನ ಮಧ್ಯಾಹ್ನ 2ರಿಂದ 5ರವರೆಗೆ ಮೊರಾರ್ಜಿ ದೇಸಾಯಿ ವಸತಿಶಾಲಾ ಶಿಕ್ಷಕರಿಗೆ ಮಾನಸಿಕ ಸಾಮರ್ಥ್ಯ ಅಭಿವೃದ್ಧಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತರಬೇತುದಾರ ಶಿವಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರೌಢಶಾಲಾ ಸಿಬ್ಬಂದಿ ರಾಘವೇಂದ್ರ, ಪ್ರದೀಪ್ ಮತ್ತಿತರರು ಪಾಲ್ಗೊಂಡಿದ್ದರು.

ಸ್ನಾತಕ ಪದವಿ ಪ್ರವೇಶ
ವಿಶ್ವವಿದ್ಯಾಲಯದ ವ್ಯಾಪ್ತಿಯ ಸಂಲಗ್ನಗೊಂಡ ಹಾಗೂ ಘಟಕ ಕಾಲೇಜುಗಳಲ್ಲಿ 2011-12ನೇ ಸಾಲಿಗೆ ಸ್ನಾತಕ ಪದವಿ ವಿವಿಧ ಕೋರ್ಸ್‌ಗಳ ಶೈಕ್ಷಣಿಕ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಪ್ರಥಮ ಸೆಮಿಸ್ಟರ್ ತರಗತಿಗಳು ಜೂನ್ 20ರಂದು ಪ್ರಾರಂಭವಾಗಲಿವೆ. ಇದರಿಂದಾಗಿ ಜೂನ್ 13ರ ಒಳಗಾಗಿ ವಿದ್ಯಾರ್ಥಿಗಳು ದಂಡ ಶುಲ್ಕ ಇಲ್ಲದೆ ಪ್ರವೇಶ ಪಡೆಯಬಹುದು ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.