ADVERTISEMENT

ತಾಜ್‌ಮಹಲ್ ಕೋಣೆಗಳನ್ನು ತೆರೆಯುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 9:07 IST
Last Updated 22 ನವೆಂಬರ್ 2017, 9:07 IST
ತಾಜ್ ಮಹಲ್‌ನಲ್ಲಿ ಬೀಗ ಹಾಕಿರುವ ಕೋಣೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಹಿಂದೂ ಆಂದೋಲನ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.
ತಾಜ್ ಮಹಲ್‌ನಲ್ಲಿ ಬೀಗ ಹಾಕಿರುವ ಕೋಣೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಹಿಂದೂ ಆಂದೋಲನ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.   

ಶಿವಮೊಗ್ಗ: ತಾಜ್ ಮಹಲ್‌ನಲ್ಲಿ ಬೀಗ ಹಾಕಿರುವ ಕೋಣೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಹಿಂದೂ ಆಂದೋಲನ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.

ಪ್ರೇಮದ ಪ್ರತೀಕವೆಂದು ತಿಳಿಯಲಾಗಿರುವ ತಾಜ್ ಮಹಲ್ ಕಟ್ಟಡಕ್ಕೆ ಮೊಗಲರು ತಾಜ್ ಮಹಲ್ ಎಂದು ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಇತಿಹಾಸದ ಅಭ್ಯಾಸಕರು ಪುರಾವೆ ನೀಡಿದ್ದಾರೆ. ಹಾಗಾಗಿ ಇದು ಮಮ್ತಾಜ್ ಗೋರಿಯೇ ಎಂಬುದರ ಬಗ್ಗೆ ತಜ್ಞರ ಸಮಿತಿಯಿಂದ ಸಂಶೋಧನೆ ನಡೆಸಬೇಕು ಎಂದು ಒತ್ತಾಯಿಸಿದರು.

ತಾಜ್ ಮಹಲ್ ನಲ್ಲಿ ಬೀಗ ಹಾಕಿಟ್ಟಿರುವ ಕೋಣೆಗಳನ್ನು ತೆರೆದು ಈ ಪ್ರದೇಶದಲ್ಲಿ ಉತ್ಖನನ ನಡೆಸಿದರೆ ಹಲವು ವಿಷಯಗಳು ಬೆಳಕಿಗೆ ಬರಬಹುದು. ಅಲ್ಲದೆ
ಕೇರಳ, ತಮಿಳುನಾಡು, ಕರ್ನಾಟಕ, ಬಂಗಾಳ, ಪಂಜಾಬ್, ಉತ್ತರ ಪ್ರದೇಶ, ಜಮ್ಮು ಕಾಶ್ಮೀರದಲ್ಲಿ ಹಿಂದೂ ಮುಖಂಡರನ್ನು ಹತ್ಯೆ ಮಾಡುತ್ತಿದ್ದು ಇದನ್ನು ಕೇಂದ್ರೀಯ ತನಿಖಾದಳಕ್ಕೆ ವಹಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ರಾಷ್ಟ್ರೀಯ ಹಿಂದೂ ಆಂದೋಲನದ ಪ್ರಮುಖರಾದ ವಿಜಯ ರೇವಣ್ಕರ್, ಸೌಮ್ಯ, ರೇವತಿ, ವಿಶ್ವನಾಥ್ ಮುಕುಂದ ಮೊಗೇರ, ಪ್ರಭಾ ಕಾಮತ್, ಸೆಲ್ವ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.