ADVERTISEMENT

ಮನಸೆಳೆದ ಚಿತ್ರಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 6:15 IST
Last Updated 2 ಫೆಬ್ರುವರಿ 2011, 6:15 IST

ಸೊರಬ: ಪಟ್ಟಣದ 3 ಕಲರ್ಸ್‌ ಚಿತ್ರಕಲಾ ಸಂಸ್ಥೆ ಭಾನುವಾರ ಸ್ವಾಮಿ ವಿವೇಕಾನಂದ ಬೋಧನಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನ ನೂರಾರು ಕಲಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿ ಆಯಿತು.ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಜಿ. ರಾಮಚಂದ್ರ ಪ್ರದರ್ಶನ ಉದ್ಘಾಟಿಸಿದರು.

ಪ್ರಾಯೋಜಕರಾದ ಕೆ.ಎನ್. ರಾಘವೇಂದ್ರ, ಸಂತೋಷ್ ಗುಡಿಗಾರ್, ವಿಶುಕುಮಾರ್ ನಾವುಡ ಕುಂಚ ಜಾದೂ, ಸಂಗೀತಕ್ಕೆ ತಕ್ಕ ಚಿತ್ರ ಸಂಯೋಜನೆ, ದಾರದಿಂದ ಚಿತ್ರಕಲೆ, ಕುಂಚವರ್ಣ ಚಿತ್ರ ರಚನೆ, ಅದೃಶ್ಯದಿಂದ ಚಿತ್ರಕಲೆ ಪ್ರದರ್ಶಿಸಿದರು.

ಸಂಸ್ಥೆಯಲ್ಲಿ ತರಬೇತಿ ಹೊಂದಿದ ಹಿರಿಯ ಹಾಗೂ ಕಿರಿಯ ಕಲಾವಿದರ ಚಿತ್ರಗಳು, ಕುಂಭಕಲೆ, ಗ್ಲಾಸ್ ಪೇಯಿಂಟಿಂಗ್, ಕರ್ಟನ್ ಡಿಸೈನಿಂಗ್, ಹಸೆಚಿತ್ರ, ಕಿರಿಯರ ಸೃಜನಶೀಲತೆಗೆ ಇಂಬು ಕೊಡುವ ನೂರಾರು ಚಿತ್ರಗಳ ಪ್ರದರ್ಶನವನ್ನು ಪಟ್ಟಣದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದು, ನೋಡುಗರನ್ನು ಬಹುವಾಗಿ ಆಕರ್ಷಿಸಿದವು.

ಮಹಿಳಾ ಕಲಾವಿದರಾದ ಬಿ. ಸಂಧ್ಯಾ, ಎಂ. ಅಕ್ಷತಾ, ಅನಸೂಯಾ, ಮಮತಾ, ಶಿಲ್ಪಾ, ಉಷಾ, ಸುಮನ್, ಚೈತ್ರ, ಹೇಮಾ, ರೇವತಿ, ಆಯಿಷಾ, ಮಮತಾ ಹಾಗೂ ಕಿರಿಯ ಕಲಾವಿದರಾದ ಚಂದನಾ, ಸುಶ್ಮಿತಾ, ಸುಮಲತ, ಚಂದನ್, ರೂಪಾ, ಪಲ್ಲವಿ, ಎಸ್.ಜಿ. ಭೂಮಿಕಾ, ಬಿ.ಬಿ. ಭೂಮಿಕಾ, ಬಿಂದು, ಅಭಯ್, ನಾಗರಾಜ್, ಸುಹಾಸ್, ಹರ್ಷ, ನಂದನ್, ವರ್ಷಿಣಿ ಹಿರೇಮಠ್, ವಿನಯ್, ಉದ್ಭವ್, ಕರಣ್ ಮೊದಲಾದವರು ರಚಿಸಿದ ಕೃತಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು.

ಸಂಜೆ ಇತಿಹಾಸ ಸಂಶೋಧಕ ಶ್ರೀಪಾದ್ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಲಾಂಛನ ಉದ್ಘಾಟನೆ ಹಾಗೂ ಸಮಾರೋಪ ಹಮ್ಮಿಕೊಳ್ಳಲಾಗಿತ್ತು.ಕರ ಕುಶಲಕರ್ಮಿ ಬಿ. ಕೃಷ್ಣಮೂರ್ತಿ, ಬೋಧನಾ ಸಂಸ್ಥೆ ಅಧ್ಯಕ್ಷ ದಿವಾಕರಭಟ್ ಭಾವೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.