ADVERTISEMENT

ಮರಗಳ ಮಾರಣ ಹೋಮ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 9:40 IST
Last Updated 28 ಅಕ್ಟೋಬರ್ 2011, 9:40 IST

ಕಾರ್ಗಲ್: ಸಮೀಪದ ಕೆಪಿಸಿ ಗ್ಯಾರೇಜ್‌ಲೈನ್ ಹಿಂಭಾಗದ ಪವರ್‌ಚಾನಲ್ ಮೇಲ್ಭಾಗದ ಕಾರ್ಗಲ್ ವಲಯಾರಣ್ಯದಲ್ಲಿ ಮರಗಳ ಮಾರಣ ಹೋಮ ನಡೆದಿದೆ.

ಅಮೂಲ್ಯ ಮರಗಳು ಕಾಡುಗಳ್ಳರ ಕೊಡಲಿಗೆ ಬಲಿಯಾಗಿವೆ. ಉತ್ತಮ ಜಾತಿಯ ಭರಣಿಗೆ ಮರಗಳು ಇದರಲ್ಲಿ ಸೇರಿದ್ದು, ಭಾರೀ ಬೆಲೆ ಬಾಳ ಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಗಲ್ ವಲಯ ಅರಣ್ಯಾಧಿಕಾರಿ ಆಲ್ವಿನ್ ಮತ್ತು ವನಪಾಲಕ ಅಶೋಕ್ ಸಿಬ್ಬಂದಿಯೊಂದಿಗೆ ದಾಳಿನಡೆಸಿದಾಗ ಮರಗಳ್ಳರು ಪರಾರಿಯಾಗಿದ್ದಾರೆ.

ಸ್ಥಳದಲ್ಲಿದ್ದ ಮರಗಳನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆಯವರು, ಮಹಜರು ಮಾಡಿ ಭಾರೀ ಮರದ ದಿಮ್ಮಿಗಳನ್ನು ಕಾರ್ಗಲ್ ಕಚೇರಿ ಆವರಣಕ್ಕೆ ಸಾಗಿಸಿದ್ದಾರೆ ಎಂದು ಆಲ್ವಿನ್ ತಿಳಿಸಿದರು.

ಪ್ರಕರಣದ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ದೊರೆತಿದ್ದು ತನಿಖೆ ಮುಂದುವರಿದಿದೆ ಎಂದೂ ತಿಳಿಸಿದ್ದಾರೆ.

ಶರಾವತಿ ಕಣಿವೆಯನ್ನು ಉಳಿಸುವ ನಿಟ್ಟಿನಲ್ಲಿ ಸ್ಥಳೀಯ ಯುವಕರು ಅರಣ್ಯ ಇಲಾಖೆಗೆ ಸಹಕಾರ ನೀಡಿ, ಅರಣ್ಯ ನಾಶ ಮಾಡುವವರ ಬಗ್ಗೆ ಸುಳಿವು ನೀಡಬೇಕು ಎಂದು ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.