ADVERTISEMENT

ರಂಗನಾಥ ವಿವಿಧೋದ್ದೇಶ ಸಹಕಾರ ಸಂಸ್ಥೆಗೆ ನೂರರ ಸಂಭ್ರಮ

ಆರ್.ರಾಘವೇಂದ್ರರಾವ್
Published 13 ಅಕ್ಟೋಬರ್ 2017, 9:45 IST
Last Updated 13 ಅಕ್ಟೋಬರ್ 2017, 9:45 IST
ಸೊರಬ ಶ್ರೀರಂಗನಾಥ ವಿವಿದೋದ್ದೇಶ ಸಹಕಾರ ಸಂಘದ ಹೊರ ನೋಟ
ಸೊರಬ ಶ್ರೀರಂಗನಾಥ ವಿವಿದೋದ್ದೇಶ ಸಹಕಾರ ಸಂಘದ ಹೊರ ನೋಟ   

ಸೊರಬ: ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀರಂಗನಾಥ ವಿವಿಧೋದ್ದೇಶ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ ಅ.14ರಂದು ನಡೆಯಲಿದೆ.
ಸ್ಥಾಪನೆಗೊಂಡು ನೂರು ವರ್ಷದ ಹಾದಿಯಲ್ಲಿ ರಂಗನಾಥ ಸಹಕಾರ ಸಂಘವು ಸಣ್ಣಪುಟ್ಟ ಏಳುಬೀಳಗಳ ನಡುವೆಯೂ ಉತ್ತಮ ವಹಿವಾಟು ನಡೆಸಿ ಸಂಘಟನಾತ್ಮಕವಾಗಿ ಬಲಗೊಂಡು ಸಂಭ್ರಮಾಚರಣೆಯ ಹೊಸ್ತಿಲಲ್ಲಿ ನಿಂತಿರುವುದು ಸಹಕಾರಿ ಸಂಸ್ಥೆಗೆ ಗರಿ ಇಟ್ಟಂತಾಗಿದೆ.

ಈ ಹಿಂದೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ವೆಂಕಟಗಿರಿರಾವ್ ಹೊಸಬಾಳೆ, ಎನ್.ಗಣಪತಿರಾವ್, ಎಚ್.ಎಸ್.ಮಂಜಪ್ಪ, ಕರಿಬಸಪ್ಪ ಶೆಟ್ಟಿ, ಎನ್.ಮಂಜಪ್ಪ, ನಾಡಿಗ್ ಲಕ್ಷ್ಮಣರಾವ್, ಪಾಂಗಾಳ ಡಾಕ್ಟರ್, ಕೃಷ್ಣಮೂರ್ತಿ ಭಾವೆ ಸೇರಿದಂತೆ ಅನೇಕ ಸಹಕಾರಿ ಧುರೀಣರ ಮತ್ತು ಚಿಂತಕರ ಪರಿಶ್ರಮದಿಂದ ಸಂಘವು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ ಎನ್ನುತ್ತಾರೆ ನಿರ್ದೇಶಕ ಡಿ.ಎಸ್.ಶಂಕರ್.

ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದಿರುವ ಕಾಲಘಟ್ಟದಲ್ಲಿ 1917ರಂದು ಬ್ಯಾಂಕ್ ಸ್ಥಾಪನೆ ಮಾಡಲಾಯಿತು. ವ್ಯವಹಾರ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಜತೆಗೆ ಆರ್ಥಿಕವಾಗಿ ಸದೃಢಗೊಳ್ಳಲು ಸಾಧ್ಯವಾಗಿದೆ. ಜನರಿಗೆ ಯೋಗ್ಯ ಬೆಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ನ್ಯಾಯಬೆಲೆ ಅಂಗಡಿ, ಮುದ್ರಾಂಕ ಪತ್ರಗಳ ಮಾರಾಟ ಸೇರಿದಂತೆ ಹತ್ತು ಹಲವು ಯೋಜನೆಗಳೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಂಸ್ಥೆಯ ಹೆಗ್ಗಳಿಕೆ ಹೆಚ್ಚಿಸಿದೆ.

ADVERTISEMENT

ಸಂಘವು ₹  10ಗಳ ಷೇರುಗಳೊಂದಿಗೆ ಪ್ರಾರಂಭಗೊಂಡು ಇಂದು ಗರಿಷ್ಠ ₹ 500 ಷೇರು ಸಂಗ್ರಹಿಸಲಾಗುತ್ತಿದೆ. ಸಂಸ್ಥೆಯಲ್ಲಿನ ಷೇರುದಾರರಿಗೆ ₹ 25ಸಾವಿರವರೆಗೆ ಸಾಲದ ಮಿತಿಯನ್ನು ಹೆಚ್ಚಿಸುವುದರ ಮೂಲಕ ಈ ಸ್ಟಾಂಪಿಂಗ್ ಸೇವೆ ಮುಂತಾದ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಚಿಂತನೆ ಹೊಂದಿದೆ.

300ಕ್ಕೂ ಅಧಿಕ ಷೇರುದಾರರನ್ನು ಹೊಂದಿರುವ ಸಹಕಾರಿ ಸಂಸ್ಥೆಯು ₹ 5.30ಲಕ್ಷ ಸಾಲ ನೀಡಿದೆ. ಪ್ರಸ್ತುತ ₹ 3ಲಕ್ಷ ಲಾಭಾಂಶ ಹೊಂದಿದೆ. ಪ್ರತಿನಿತ್ಯ ₹ 9ರಿಂದ 10 ಸಾವಿರದವರೆಗೆ ಪಿಗ್ಮಿ ಸಂಗ್ರಹವಾಗುತ್ತಿದೆ. ಅನೇಕ ಸಹಕಾರಿ ಧುರೀಣರ ಶ್ರಮದಿಂದ ಪ್ರಗತಿಯಡಿಗೆ ನಡೆಯುತ್ತಿದೆ ಎಂದು ನಿರ್ದೇಶಕ ಮಧುರಾಯ್ ಜಿ.ಶೇಟ್ ಪ್ರಜಾವಾಣಿಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.