ADVERTISEMENT

ಸೊರಬ: ದಸರಾ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 6:10 IST
Last Updated 15 ಸೆಪ್ಟೆಂಬರ್ 2011, 6:10 IST

ಸೊರಬ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ದಸರಾ, ಮಹಿಳಾ ಕ್ರೀಡಾಕೂಟ ಹಾಗೂ ಪಂಚಾಯತ್ ಯುವ ಕ್ರೀಡಾ ಖೇಲ್ ಅಭಿಯಾನ ಕ್ರೀಡಾಕೂಟಕ್ಕೆ ಜಿ.ಪಂ. ಉಪಾಧ್ಯಕ್ಷ ಎಚ್.ಬಿ. ಗಂಗಾಧರಪ್ಪ ಸೋಮವಾರ ಚಾಲನೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಮ್ಮ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಆರ್.ಕೆ. ಹೇಮಾವತಿ, ತಾಲ್ಲೂಕು ಪಂಚಾಯ್ತಿ ಇಒ ಪುಷ್ಪಾ ಕಮ್ಮಾರ್, ಕ್ರೀಡಾಧಿಕಾರಿ ಎಸ್.ಎಸ್. ಬಣಕಾರ್, ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಎಸ್.ಆರ್. ಕುಮಾರಸ್ವಾಮಿ, ಸ್ಪಂದನ ರೂರಲ್ ಡೆವಲೆಪ್‌ಮೆಂಟ್ ಸಂಸ್ಥೆಯ ಕೆ.ಪಿ. ಜಯಪ್ಪ, ಕರವೇ ಅಧ್ಯಕ್ಷ ಸಿ.ಕೆ. ಬಲೀಂದ್ರಪ್ಪ ಉಪಸ್ಥಿತರಿದ್ದರು.
ಗ್ರಾಮೀಣ ಯುವಕ ಯುವತಿಯರು ಕೊಕ್ಕೊ, ಕಬಡ್ಡಿ, ವಾಲಿಬಾಲ್, ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ದೈಹಿಕ ಶಿಕ್ಷಕರಾದ ಬಸವಣ್ಯಪ್ಪ, ಮೃತ್ಯುಂಜಯ ಗೌಡ, ವಿಜಯಕುಮಾರ್, ಈಶ್ವರಪ್ಪ, ಧರ್ಮಪ್ಪ, ತುಳಜಾ ವಿ. ನಾಯಕ್, ಯಂಕ್ಯಾನಾಯ್ಕ, ಪರಮೇಶ್ವರಪ್ಪ, ಮುರುಗೇಂದ್ರಪ್ಪ ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.