ADVERTISEMENT

‘ಸ್ಪಾರ್‌ ಹೈಪರ್ ಮಾರ್ಕೆಟ್ ಆರಂಭ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 11:42 IST
Last Updated 5 ಏಪ್ರಿಲ್ 2018, 11:42 IST

ಶಿವಮೊಗ್ಗ: ನಗರದ ಬ್ಯಾರಿಸ್ ಸಿಟಿ ಸೆಂಟ್ರಲ್ ಮಾಲ್‌ನಲ್ಲಿ ದುಬೈ ಮೂಲದ ಲ್ಯಾಂಡ್ ಮಾರ್ಕ್ ಕಂಪನಿಯ ಸಹ ಸಂಸ್ಥೆ ‘ಸ್ಪಾರ್‌ ಹೈಪರ್ ಮಾರ್ಕೆಟ್’ ಬುಧವಾರದಿಂದ ಆರಂಭವಾಗಿದೆ.ಇದು ದೇಶದಲ್ಲಿ ಸಂಸ್ಥೆಯ 20ನೇ ಮಳಿಗೆ. ಈಗಾಗಲೇ ಬೆಂಗಳೂರು, ಮಂಗಳೂರು, ಚೆನ್ನೈ, ಹೈದರಾಬಾದ್, ಕೊಯಮತ್ತೂರು, ದೆಹಲಿಯಲ್ಲಿ ಮಳಿಗೆಗಳು ಕಾರ್ಯನಿರ್ವವಹಿಸುತ್ತಿವೆ. ಶಿವಮೊಗ್ಗ ಮಳಿಗೆ 35 ಸಾವಿರ ಚದರಡಿ ವಿಸ್ತೀರ್ಣ ಹೊಂದಿದೆ. ಸುಮಾರು 50ಕ್ಕೂ ಸಾವಿರಕ್ಕೂ ಹೆಚ್ಚು ಸಾಮಗ್ರಿಗಳು ಗ್ರಾಹಕರಿಗೆ ದೊರೆಯಲಿವೆ. ಗ್ರಾಹಕರ ಅನುಕೂಲಕ್ಕಾಗಿ 15 ಬಿಲ್ಲಿಂಗ್ ಕೌಂಟರ್‌ ತೆರೆಯಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜು ಕೃಷ್ಣನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಉಡುಪು, ದಿನಸಿ, ಹಣ್ಣು, ತರಕಾರಿ, ಹಾಲಿನ ಉತ್ಪನ್ನ, ಅಡುಗೆ ಸಾಮಗ್ರಿ, ಗೃಹ ಬಳಕೆ ವಸ್ತುಗಳು, ವಿದ್ಯುನ್ಮಾನ ಸಾಮಗ್ರಿಗಳು ಸೇರಿದಂತೆ ಬಗೆ ಬಗೆಯ ಉತ್ಪನ್ನಗಳನ್ನು ಗ್ರಾಹಕರು ಸ್ಪರ್ಧಾತ್ಮಕ ದರದಲ್ಲಿ ಖರೀದಿಸಬಹುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಿಇಒ ರಾಜಶೇಖರ್ ರಾವ್, ಬ್ಯಾರಿಸ್ ಸಮೂಹ ಸಂಸ್ಥೆ ಮುಖ್ಯಸ್ಥ ಬ್ಯಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.