ADVERTISEMENT

ಹಿಂದೂ ಸಮಾಜ ಸಂಘಟನೆಗೆ ಕರೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 6:02 IST
Last Updated 27 ಡಿಸೆಂಬರ್ 2012, 6:02 IST

ಶಿಕಾರಿಪುರ: ಸಂಘಟಿತರಾಗಿ ದೇಶ ನಿರ್ಮಾಣ ಮಾಡುವ ಜವಬ್ದಾರಿ ನಮ್ಮ ಮೇಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಬೌದ್ಧಿಕ್ ಶಿಕ್ಷಣ ಪ್ರಮುಖರಾದ ಆ.ಪು. ನಾರಾಯಣಪ್ಪ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ಮಂಗಳವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ ತಾಲ್ಲೂಕು ಸಾಂಘಿಕ್ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಭಾರತ ದೇಶದಲ್ಲೇ ಹಿಂದೂಗಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ದೇಶದಲ್ಲಿ ಹಿಂದೂಗಳ ಮತಾಂತರ, ಭಯೋತ್ಪಾದನೆ, ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶುದ್ದ ರಾಷ್ಟ್ರೀಯತೆಯ ಆಧಾರದ ಮೇಲೆ ಹಿಂದೂ ಸಮಾಜವನ್ನು ಸಂಘಟಿಸುವ ಕಾರ್ಯ ನಿರ್ವಹಿಸುತ್ತಿದೆ. ಹಿಂದೂಗಳಿಗಿರುವುದೊಂದೇ ಭಾರತ ದೇಶ ಇದನ್ನು ಉಳಿಸಿಕೊಳ್ಳದಿದ್ದರೇ ಬದುಕಲು ಎಲ್ಲೂ ಜಾಗ ಸಿಗುವುದಿಲ್ಲ ಎಂದರು.

ಸಂಘಟನೆಯ ಪೂರ್ತಿ ಅಸ್ತಿತ್ವ ಶಾಖೆಯಲ್ಲಿದೆ ದಿನ ಪ್ರತಿ ಶಾಖೆಗೆ ಹೋಗುವ ಮೂಲಕ, ವೈಯಕ್ತಿಕ ಅಹಂಕಾರ ಕಡಿಮೆ ಮಾಡಿಕೊಂಡು ರಾಷ್ಟ್ರಮಾತೆಯ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಪದ್ಮನಾಭ್‌ಭಟ್, ಪ್ರಗತಿ ಬ್ಯಾಂಕ್‌ನ ವೀರಣ್ಣ, ಬಿ.ಪಿ. ನಾರಾಯಣರಾವ್, ಎಸ್.ಬಿ. ಮಠದ್, ಕೆ.ಟಿ. ಬಾಬುರಾವ್, ಬೇಗೂರು ಮಂಜಪ್ಪ, ಕಪ್ಪನಹಳ್ಳಿ ರಾಮಪ್ಪ, ವಿಶ್ವನಾಥ್, ಪ್ರದೀಪ್, ಮಂಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.