ADVERTISEMENT

ಹೆಬ್ಬಾವು, ಕಾಳಿಂಗ ಸರ್ಪ ಸೆರೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 9:43 IST
Last Updated 17 ಜೂನ್ 2013, 9:43 IST

ಶಿವಮೊಗ್ಗ : ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಈಚೆಗೆ ಉರಗ ತಜ್ಞ ಸ್ನೇಕ್ ಕಿರಣ್ ಒಂದು ಹೆಬ್ಬಾವು ಹಾಗೂ ಒಂದು ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಅಗಸವಳ್ಳಿ ಸಮೀಪದ ಕಲ್ಲೂರು ಗ್ರಾಮದ ರುದ್ರಪ್ಪ ಎಂಬುವರ ಅಡಕೆ ತೋಟದ ಮನೆಯೊಂದರ ಕೊಠಡಿಯಲ್ಲಿದ್ದ ಸುಮಾರು 7 ಅಡಿ ಉದ್ದದ ಹೆಬ್ಬಾವು ಹಿಡಿದು, ತದನಂತರ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ತಾಲ್ಲೂಕಿನ ಮಲೆಶಂಕರ ಅರಣ್ಯ ವಲಯದ ಕಲ್ಲುಕೊಪ್ಪ ಗ್ರಾಮದ ಮಂಜುನಾಥ್ ಗೌಡ ಎಂಬುವರಿಗೆ ಸೇರಿದ ಅಡಿಕೆ ತೋಟದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ ಹಿಡಿದು, ಅರಣ್ಯ ಇಲಾಖೆ ಸಿಬ್ಬಂದಿ ರಾಮಚಂದ್ರ ಆಚಾರಿ ಸಮ್ಮುಖದಲ್ಲಿ ಅಲಸೆಗುಡ್ಡದ ಕಾಡಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.