ADVERTISEMENT

ಅಪಘಾತ: 108 ಸಿಬ್ಬಂದಿ ನೆರವಿನಿಂದ ಯುವಕ ಪಾರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 15:42 IST
Last Updated 12 ಜನವರಿ 2021, 15:42 IST
ಆನವಟ್ಟಿ ಸರ್ಕಾರಿ ಆಸ್ಪತ್ರೆಯ 108 ವಾಹನದ ಸಿಬ್ಬಂದಿಗಳಾದ ಮಾಲತೇಶ ಹಾಗೂ ಪರಮೇಶವರಪ್ಪ ಅವರು ಅಪಘಾತಕ್ಕೆ ಒಳಗಾದ ಯುವಕನ ಪೋಷಕರಿಗೆ ಆತನ ಬಳಿಯಿಂದ ಹಣ ಮತ್ತು ಗುರುತಿನ ಚೀಟಿ ಮುತಾಂದವುಗಳನ್ನು ಒಪ್ಪಿಸಲಾಯಿತು.
ಆನವಟ್ಟಿ ಸರ್ಕಾರಿ ಆಸ್ಪತ್ರೆಯ 108 ವಾಹನದ ಸಿಬ್ಬಂದಿಗಳಾದ ಮಾಲತೇಶ ಹಾಗೂ ಪರಮೇಶವರಪ್ಪ ಅವರು ಅಪಘಾತಕ್ಕೆ ಒಳಗಾದ ಯುವಕನ ಪೋಷಕರಿಗೆ ಆತನ ಬಳಿಯಿಂದ ಹಣ ಮತ್ತು ಗುರುತಿನ ಚೀಟಿ ಮುತಾಂದವುಗಳನ್ನು ಒಪ್ಪಿಸಲಾಯಿತು.   

ಆನವಟ್ಟಿ: ಸಮೀಪದ ಅಗಸನಹಳ್ಳಿ ಕ್ರಾಸ್ ಬಳಿಯ ಕೆರೆ ಏರಿ ಮೇಲೆ ಮಂಗಳವಾರ ಸಂಭವಿಸಿದ ಬೈಕ್ ಅಪಘಾತದಲ್ಲಿ ಸವಾರನ ಕಾಲುಗಳಿಗೆ ತೀವ್ರ ಗಾಯವಾಗಿ ರಕ್ತ ಸಾವ್ರವಾಗುತ್ತಿತ್ತು. ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಧಾವಿಸಿದ 108 ಆಂಬುಲೆನ್ಸ್‌ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಬೈಕ್ ಸವಾರನನ್ನು ಪ್ರಾಣಪಾಯದಿಂದ ಪಾರು ಮಾಡಿದ್ದಾರೆ.

ಮೂಗುರು ಗ್ರಾಮದ ಬಸವರಾಜ (25) ಅಪಘಾತಕ್ಕೆ ಒಳಗಾದವರು. 108 ಚಾಲಕ ಪರಮೇಶಪ್ಪ ಹಾಗೂ ಶುಶ್ರೂಷಕ (ಟಾಪ್ ನರ್ಸ್) ಮಾಲತೇಶ ಬೈಕ್ ಸವಾರನ ಬಳಿ ಇದ್ದ, ಹಣ, ಗುರುತಿನ ಚೀಟಿ ಮೊದಲಾದವನ್ನು ಯುವಕನ ಪೋಷಕರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT