ADVERTISEMENT

ಆನವಟ್ಟಿ: ವಿದ್ಯುತ್‌ ಕಿಡಿಗಳು ಸಿಡಿದು ಮೆಕ್ಕೆಜೋಳ ನಾಶ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 4:38 IST
Last Updated 16 ಡಿಸೆಂಬರ್ 2025, 4:38 IST
ಆನವಟ್ಟಿ ಸಮೀಪದ ಕೋಟಿಪುರ ವಿದ್ಯುತ್‌ ಗ್ರೀಡ್‌ ಪಕ್ಕದ ಜಮೀನಲ್ಲಿದ್ದ ಮೆಕ್ಕೆಜೋಳ ಸುಟ್ಟು ಹೋಗಿರುವುದು.
ಆನವಟ್ಟಿ ಸಮೀಪದ ಕೋಟಿಪುರ ವಿದ್ಯುತ್‌ ಗ್ರೀಡ್‌ ಪಕ್ಕದ ಜಮೀನಲ್ಲಿದ್ದ ಮೆಕ್ಕೆಜೋಳ ಸುಟ್ಟು ಹೋಗಿರುವುದು.   

ಆನವಟ್ಟಿ: ಸಮೀಪದ ಕೋಟಿಪುರ ಗ್ರಾಮದಲ್ಲಿರುವ ವಿದ್ಯುತ್‌ ಗ್ರೀಡ್‌ನಲ್ಲಿ ಸೋಮವಾರ ಮಧ್ಯಾಹ್ನ ಶಾರ್ಟ್‌ ಸರ್ಕಿಟ್‌ ಉಂಟಾಗಿ ವಿದ್ಯುತ್‌ ಕಿಡಿಗಳು ಪಕ್ಕದ ಜಮೀನ ಮೆಕ್ಕೆಜೋಳದ ಗುಡ್ಡೆಗಳಿಗೆ ಸಿಡಿದು, ನಾಲ್ಕು ಎಕರೆ ಜೋಳ ಸುಟ್ಟು ಕರಕಲಾಗಿದೆ.

ಜೋಳಕ್ಕೆ ಬಿದ್ದಿರುವ ಬೆಂಕಿ ಆರಿಸಲು ಗ್ರಾಮಸ್ಥರು ಕೈಜೋಡಿಸಿದರೂ ಬೆಂಕಿ ನಂದಿಸುವುದರೊಳಗೆ ಜೋಳ ಸಂಪೂರ್ಣ ಸುಟ್ಟು ಕರಕಲಾಗಿದೆ.

 ಈ ಹಿಂದೆ ಗ್ರೀಡ್‌ನಲ್ಲಿ ಮೂರು ನಾಲ್ಕು ಬಾರಿ ದೊಡ್ಡ ಪ್ರಮಾಣದಲ್ಲಿ ಶಾರ್ಟ್‌ ಸರ್ಕಿಟ್‌ ಆಗಿದೆ. ಇಂದು ಮದ್ಯಾಹ್ನ ವಿದ್ಯುತ್‌ ಸ್ಥಗಿತಗೊಂಡು, ನಂತರ ಲೋಡ್‌ ಮಾಡಿ ಆನ್‌ ಮಾಡಿದಾಗ, ದೊಡ್ಡ ಪ್ರಮಾಣದಲ್ಲಿ ವಿದ್ಯುತ್‌ ಕಿಡಿಗಳು ಸಿಡಿದಿವೆ. ಇದರಿಂದ ನಮ್ಮ ನಾಲ್ಕು ಎಕರೆ ಜೋಳಕ್ಕೆ ಬೆಂಕಿ ಹತ್ತಿ ಉರಿದಿದೆ. ಮೆಸ್ಕಾಂನ ಬೇಜವಾಬ್ದಾರಿಯಿಂದ ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ಕೈಸೇರುವ ಹೊತ್ತಿಗೆ ಕಳೆದುಕೊಳ್ಳಬೇಕಾಯಿತು. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಕೂಡಿಸಬೇಕು ಎಂದು ಕೋಟಿಪುರ ತಾಂಡದ ಕೃಷಿಕ ಪೀರ್ಯಾನಾಯ್ಕ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.