ADVERTISEMENT

ಆಂಜನೇಯಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 6:11 IST
Last Updated 12 ಏಪ್ರಿಲ್ 2022, 6:11 IST
ಹೊಳೆಹೊನ್ನೂರು ಸಮೀಪದ ಮೈದೊಳಲಿನಲ್ಲಿ ಸೋಮವಾರ ಆಂಜನೇಯ ಸ್ವಾಮಿ ರಥೋತ್ಸವ ಜರುಗಿತು
ಹೊಳೆಹೊನ್ನೂರು ಸಮೀಪದ ಮೈದೊಳಲಿನಲ್ಲಿ ಸೋಮವಾರ ಆಂಜನೇಯ ಸ್ವಾಮಿ ರಥೋತ್ಸವ ಜರುಗಿತು   

ಹೊಳೆಹೊನ್ನೂರು: ಸಮೀಪದ ಮೈದೊಳಲಿನಲ್ಲಿ ರಾಮನವಮಿ ಪ್ರಯುಕ್ತ ಸೋಮವಾರ ಆಂಜನೇಯ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕೆಂಡಾರ್ಚನೆಯೊಂದಿಗೆ ರಥೋತ್ಸವ ಆರಂಭವಾಯಿತು. ಬಳಿಕ ಶ್ರೀಹರಿಸೇವೆ, ಉಚ್ಚಾಯ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳುನೆರವೇರಿದವು.

ಭಕ್ತರು ಆಂಜನೇಯ ಸ್ವಾಮಿಯ ರಥ ಏಳೆದು, ರಥದ ಕಳಸಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಪ್ರಸಾದವಾಗಿ ಹಣ್ಣುತುಪ್ಪ, ಪಾನಕ, ಕೋಸಂಬರಿ ವಿತರಿಸಲಾಯಿತು.

ADVERTISEMENT

ತಮಟೆ, ಡೊಳ್ಳುಕುಣಿತ ಮೇಳಗಳು ರಥೋತ್ಸವಕ್ಕೆ ಮೆರುಗು ನೀಡಿದವು. ಸ್ವಾಮಿಗೆ ಹರಕೆ ಹೊತ್ತವರು ಮಕ್ಕಳ ಜವಳ ತೆಗೆಸುವುದು, ಮುದ್ರೆ ಹಾಕಿಸುವ ಕಾರ್ಯಕ್ರಮಗಳಲ್ಲಿಭಾಗವಹಿಸಿದರು.

ಸಂಜೆ ಓಕುಳಿಯಲ್ಲಿ ಕಾರ್ಯಕ್ರಮ ನೆರವೇರಿತು. ಗ್ರಾಮದ ಗಡಿಗೆ ಚರಗ ಚೆಲ್ಲುವುದರೊಂದಿಗೆ ರಥೋತ್ಸವ ಮುಕ್ತಾಯವಾಯಿತು. ಆಂಜನೇಯ ಸೇವಾ ಸಮಿತಿ ಮತ್ತು ಗ್ರಾಮಸ್ಥರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.