ADVERTISEMENT

ವೀಕ್ಷಣೆಗೆ ತೆರೆದ ‘ಮ್ಯೂಸಿಯಂ ಮಾಲ್ಗುಡಿ’

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 12:43 IST
Last Updated 8 ಆಗಸ್ಟ್ 2020, 12:43 IST
ನವೀಕರಣಗೊಂಡ ಶಿವಮೊಗ್ಗ ಸಮೀಪದ ಅರಸಾಳು ರೈಲುನಿಲ್ದಾಣ. 
ನವೀಕರಣಗೊಂಡ ಶಿವಮೊಗ್ಗ ಸಮೀಪದ ಅರಸಾಳು ರೈಲುನಿಲ್ದಾಣ.    

ಶಿವಮೊಗ್ಗ: ನಟ ಶಂಕರ್‌ನಾಗ್ನಿರ್ದೇಶನದ ಧಾರಾವಾಹಿ ‘ಮಾಲ್ಗುಡಿ ಡೇಸ್’ ಚಿತ್ರೀಕರಣಗೊಂಡ ಹೊಸನಗರ ತಾಲ್ಲೂಕು ಅರಸಾಳುವಿನ ನವೀಕರಣಗೊಂಡ ರೈಲುನಿಲ್ದಾಣಹಾಗೂ‘ಮ್ಯೂಸಿಯಂ ಮಾಲ್ಗುಡಿ’ಯನ್ನು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಆನ್‌ಲೈನ್ ಮೂಲಕ ಶನಿವಾರಲೋಕಾರ್ಪಣೆ ಮಾಡಿದರು.

ಆರ್.ಕೆ.ನಾರಾಯಣ್ ಅವರ ಪ್ರಸಿದ್ಧ ಕಾದಂಬರಿ ಆಧಾರಿತ ‘ಮಾಲ್ಗುಡಿ ಡೇಸ್‌’ ಧಾರಾವಾಹಿಯನ್ನು ಶಂಕರ್‌ನಾಗ್ ಅವರು ದೂರದರ್ಶನಕ್ಕಾಗಿ 1986–89ರ ಅವಧಿಯಲ್ಲಿ ನಿರ್ದೇಶಿಸಿದ್ದರು. ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮೂಡಿಬಂದ ಈ ಧಾರಾವಾಹಿ ವಿಶ್ವದ ಗಮನ ಸೆಳೆದಿತ್ತು. ಅರಸಾಳು ನಿಲ್ದಾಣ ಈಗಲೂ ಇದು ಜನರ ಮನದಲ್ಲಿಮಾಲ್ಗುಡಿ ನಿಲ್ದಾಣವೆಂದೇ ಪ್ರಸಿದ್ಧಿಯಾಗಿದೆ.

130 ವರ್ಷ ಹಳೆಯದಾದ ಬ್ರಿಟಿಷರ ಕಾಲದ ಈ ನಿಲ್ದಾಣವನ್ನು ₹ 1.03 ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. ಸಂಸದಬಿ.ವೈ.ರಾಘವೇಂದ್ರ ಅವರ ಸಂಸದರ ನಿಧಿಯನ್ನೂ ಬಳಸಿಕೊಂಡು ಮಲೆನಾಡಿನ ಸಂಸ್ಕೃತಿಯ ಪ್ರತೀಕವಾಗಿರೂಪಿಸಲಾಗಿದೆ. ಹಳೆಯ ಮಂಗಳೂರುಹೆಂಚಿನ ಕಟ್ಟಡವನ್ನೇಭದ್ರಗೊಳಿಸಲಾಗಿದೆ. ಹಸಿರು ಬಣ್ಣದ ಗೋಟೆಗಳ ಮಧ್ಯೆ ಕೆಂಪು ಇಟ್ಟಿಗೆಯ ಕಮಾನಿನ ಎರಡು ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಪ್ರಾಣಿ, ಪಕ್ಷಿ, ಹೂಗಳ ಚಿತ್ತಾರ ಮೂಡಿಸಲಾಗಿದೆ. ನೀರಿನ ಚಿಲುಮೆ, ಹೂಜಿಗಳನ್ನು ಜೋಡಿಸಲಾಗಿದೆ. ಟಿಕೆಟ್‌ ಕೌಂಟರ್‌ ಬಳಿಯೂ ಬಣ್ಣಗಳ ಕಲಾಕೃತಿಗಳನ್ನು ಮೂಡಿಸಲಾಗಿದೆ.

ADVERTISEMENT

ಗಮನ ಸೆಳೆಯುವ ಮ್ಯೂಸಿಯಂ ಮಾಲ್ಗುಡಿ:
ಕಲಾ ನಿರ್ದೇಶಕ ಜಾನ್ ದೇವರಾಜ್ ನೇತೃತ್ವದಲ್ಲಿ ನಿಲ್ದಾಣದ ಆವರಣದಲ್ಲೇ ‘ಮ್ಯೂಸಿಯಂ ಮಾಲ್ಗುಡಿ’ ಸಿದ್ಧಪಡಿಸಲಾಗಿದೆ. ಮಲೆನಾಡಿನ ಸಂಸ್ಕೃತಿ, ಪರಿಸರ, ಸಮಗ್ರತೆ, ಕೃಷಿ, ಬಳಕೆ ಸಾಮಗ್ರಿಗಳು, ಪ್ರಚೀನ ಕಲಾಕೃತಿಗಳನ್ನು ನೆಲೆಗೊಳಿಸಲಾಗಿದೆ. ಶಂಕರ್‌ನಾಗ್ ಪ್ರತಿಮೆ ಸ್ಥಾಪಿಸಲಾಗಿದೆ. ಮಾಲ್ಗುಡಿಯಲ್ಲಿ ಬರುವ ನಿಲ್ದಾಣದ ಒಂಟಿ ಮರ, ಪ್ಲಾಟ್‌ಫಾರಂ, ಕಲ್ಲು ಬೆಂಚುಗಳು, ನಿಲ್ದಾಣದ ಸಾಲು ಕಂಬಿಗಳಿಗೂ ಜೀವ ತುಂಬಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.