ಹೊಳೆಹೊನ್ನೂರು: ಬಾಲಕಿಯನ್ನು ಪ್ರೀತಿಸಿ ಮದುವೆಯಾದ ಆರೋಪದಡಿ ಯವಕನನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಬಾಲಮಂದಿರದಲ್ಲಿ ಇರಿಸಲಾಗಿದೆ.
ಬಾಲಕಿ 13 ವರ್ಷವಿರುವಾಗಲೇ ಅದೇ ಗ್ರಾಮದ ಯುವಕನೊಂದಿಗೆ ಪ್ರೀತಿಯ ನಂಟು ಬೆಸೆದಿತ್ತು. ಮನೆಯಲ್ಲಿ ಪ್ರೀತಿಗೆ ಸಮ್ಮತಿ ಸಿಗುವುದಿಲ್ಲ ಎಂದು ತೀರ್ಮಾನಿಸಿ ಬಾಲಕಿ ಮತ್ತು ಯುವಕ ತಿಂಗಳ ಹಿಂದೆ ನಾಪತ್ತೆಯಾಗಿದ್ದರು.
ಬಾಲಕಿ ನಾಪತ್ತೆ ಕುರಿತು ತಿಂಗಳ ಹಿಂದೆಯೇ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ‘ಅದೇ ಗ್ರಾಮದ ಯುವಕ ಮಗಳನ್ನು ಕರೆದೊಯ್ದಿರಬಹುದು’ ಎಂದು ಶಂಕಿಸಿ ಬಾಲಕಿಯ ಪೋಷಕರು ದೂರು ನೀಡಿದ್ದರು.
ತಿಂಗಳ ಹಿಂದೆ ಬೇರೆಡೆ ಹೋಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದ ಜೋಡಿ ಈಗ ಪತ್ತೆಯಾಗಿದೆ. ಬಾಲಕಿಯನ್ನು ಮದುವೆಯಾದ ಕಾರಣ ಪೋಸ್ಕೊ ಕಾಯ್ದೆ ಅಡಿ ಯುವಕನನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.