ADVERTISEMENT

ಸ್ವಾಮಿನಾಥ ಗೋಪಾಲ್ ರಾವ್, ಜಗದೀಶ್‌ಗೆ ಮಾನಸ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 19:44 IST
Last Updated 15 ಫೆಬ್ರುವರಿ 2021, 19:44 IST
ಸ್ವಾಮಿನಾಥ ಗೋಪಾಲರಾವ್, ಸ್ವಾಮಿನಾಥ
ಸ್ವಾಮಿನಾಥ ಗೋಪಾಲರಾವ್, ಸ್ವಾಮಿನಾಥ   

ಶಿವಮೊಗ್ಗ: ಇಲ್ಲಿನ ಮಾನಸ ಟ್ರಸ್ಟ್‌ ಡಾ.ಕಟೀಲ್ ಅಶೋಕ್ ಪೈ ಸ್ಮರಣಾರ್ಥ ನೀಡುವ ಮಾನಸ ರಾಷ್ಟ್ರೀಯ ಪ್ರಶಸ್ತಿಗೆ ಬೆಂಗಳೂರಿನ ಮನೋವೈದ್ಯ ಡಾ.ಸ್ವಾಮಿನಾಥ ಗೋಪಾಲರಾವ್, ನಿಮ್ಹಾನ್ಸ್ ಪ್ರಾಧ್ಯಾಪಕ ಡಾ.ಜಗದೀಶ್ ತೀರ್ಥಹಳ್ಳಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ತಲಾ ₹ 75 ಸಾವಿರ ನಗದು, ಫಲಕ ಒಳಗೊಂಡಿದೆ. ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿಫೆ.20ರಂದು ಸಂಜೆ 5.30ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಬರಹಗಾರ ಜಯಂತ್ ಕಾಯ್ಕಿಣಿ ಕಾರ್ಯಕ್ರಮ ಉದ್ಘಾಟಿಸುವರು ಎಂದು ಟ್ರಸ್ಟ್‌ ನಿರ್ದೇಶಕ ಡಾ.ರಾಜೇಂದ್ರ ಚೆನ್ನಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT