ADVERTISEMENT

ಶಿವಮೊಗ್ಗ ಜಿಲ್ಲೆಯ 14 ಲಕ್ಷ ಕುಟುಂಬಗಳಿಗೆ ಆಯುಷ್‌ಮಾನ್ ಕಾರ್ಡ್

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 9:40 IST
Last Updated 26 ಡಿಸೆಂಬರ್ 2019, 9:40 IST
ಶಿವಮೊಗ್ಗದ ಬೊಮ್ಮನಕಟ್ಟೆ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಆರೋಗ್ಯ ಕಾರ್ಡ್ ವಿತರಿಸಿದರು.
ಶಿವಮೊಗ್ಗದ ಬೊಮ್ಮನಕಟ್ಟೆ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಆರೋಗ್ಯ ಕಾರ್ಡ್ ವಿತರಿಸಿದರು.   

ಶಿವಮೊಗ್ಗ: ಜಿಲ್ಲೆಯ 14 ಲಕ್ಷ ಕುಟುಂಬಗಳನ್ನು ಆಯುಷ್‌ಮಾನ್ ಭಾರತ್ ಯೋಜನೆ ವ್ಯಾಪ್ತಿಗೆ ತರುವ ಗುರಿ ಇದೆ. ಈಗಾಗಲೇ 4 ಲಕ್ಷ ಕುಟುಂಬಗಳಿಗೆ ಕಾರ್ಡ್ ವಿತರಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಬೊಮ್ಮನಕಟ್ಟೆ ಆರೋಗ್ಯ ಕೇಂದ್ರದಲ್ಲಿ ಪ್ರೇರಣಾ ಎಜುಕೇಷನ್ ಸೋಷಿಯಲ್ ಟ್ರಸ್ಟ್ಆಯೋಜಿಸಿದ್ದ ಆಯುಷ್ಮಾನ್ ಆರೋಗ್ಯ ಕಾರ್ಡ್‌ ವಿತರಣಾ ಕಾರ್ಯಕ್ರಮದಲ್ಲಿಅವರುಮಾತನಾಡಿದರು.

ಪ್ರಧಾನಿ ವಾಜಪೇಯಿಅವರ ಜನ್ಮದಿನದ ನೆನಪಿಗಾಗಿಜಿಲ್ಲೆಯ 123 ಪ್ರಾಥಮಿಕ ಕೇಂದ್ರಗಳಲ್ಲಿ ಕಾರ್ಡ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.26 ರಿಂದ 28ರವರೆಗೆ1 ಲಕ್ಷ ಕುಟುಂಬಗಳಿಗೆ ಕಾರ್ಡ್‌ವಿತರಿಸುವ ಗುರಿ ಹೊಂದಲಾಗಿದೆ. ಈ ಯೋಜನೆ ಮೂಲಕಬಿಪಿಎಲ್ ಕಾರ್ಡ್‌ ಇರುವವರಿಗೆ ವಾರ್ಷಿಕ ₹5 ಲಕ್ಷ, ಎಪಿಎಲ್ ಕಾರ್ಡ್‌ದಾರರಿಗೆ₹1.5 ಲಕ್ಷ ನೆರವು ಸಿಗಲಿದೆ ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ,ಆಯುಷ್ಮಾನ್ ಭಾರತ್ ಯೋಜನೆ ಬಡವರ ಬೆಳಕಾಗಿದೆ.ಹೃದಯಾಘಾತ, ಕ್ಯಾನ್ಸರ್ ಸೇರಿದಂತೆ400ಕ್ಕೂ ಹೆಚ್ಚು ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.ಎಪಿಎಲ್‌ ಕಾರ್ಡ್‌ ಇರುವವರಿಗೂ ಈ ಯೋಜನೆ ಅನ್ವಯಿಸುತ್ತದೆ. ಇದುವಿಶ್ವದಲ್ಲಿಯೇ ಅತಿ ದೊಡ್ಡಸರ್ಕಾರಿಪ್ರಾಯೋಜಿತ ಆರೋಗ್ಯಸೇವೆಎಂದು ಬಣ್ಣಿಸಿದರು.

ಕಾಯಿಲೆ ಉಲ್ಬಣವಾಗುವವರೆಗೂ ಯಾರೂ ಕಾಯಬಾರದು. ಅವಸರದಲ್ಲಿ ಕಾರ್ಡ್ ಮಾಡಿಸಬಾರದು. ಪ್ರೇರಣಾ ಎಜುಕೇಷನ್ ಸೋಷಿಯಲ್ ಟ್ರಸ್ಟ್ ಎಲ್ಲರಿಗೂ ಕಾರ್ಡ್ ತಲುಪಿಸಲು ಶ್ರಮಿಸುತ್ತಿದೆಎಂದು ಶ್ಲಾಘಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರುದ್ರೇಗೌಡ, ಮೇಯರ್ ಲತಾ ಗಣೇಶ್, ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್,ಪಾಲಿಕೆ ಸದಸ್ಯಎಸ್.ಜ್ಞಾನೇಶ್ವರ್, ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಂತೋಷ್ ಬಳ್ಳೆಕೆರೆ, ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ,ಡಾ.ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.