
ಪ್ರಜಾವಾಣಿ ವಾರ್ತೆ
ಶಿವಮೊಗ್ಗ: ಬೆಹರೇನ್ ದೇಶದ ಕನ್ನಡ ಸಂಘ ಆಯೋಜನೆ ಮಾಡಿರುವ ನಾಟ್ಯರಾಣಿ ಶಾಂತಲೆ ಆತ್ಮಕತೆ ಆಧಾರಿತ ‘ಹೆಜ್ಜೆಗೊಲಿದ ಬೆಳಕು’ ಏಕವ್ಯಕ್ತಿ ಪ್ರದರ್ಶನಕ್ಕೆ ಶಿವಮೊಗ್ಗ ತಾಲ್ಲೂಕಿನ ಬೆಳಕಕಟ್ಟೆ ಗ್ರಾಮದ ಶಂಕರ್ ಬೆಳಕಿನ ನಿರ್ವಹಣೆಗೆ ತೆರಳುತ್ತಿದ್ದಾರೆ. ಈ ನಾಟಕ ಬೆಹರೈನ್ ಮನಾಮದಲ್ಲಿರುವ ಕನ್ನಡ ಭವನ ಸಭಾಂಗಣದಲ್ಲಿ ಡಿಸೆಂಬರ್ 19ರಂದು ಪ್ರದರ್ಶನಗೊಳ್ಳಲಿದೆ.
ರಂಗಭೂಮಿಯಲ್ಲಿ ಬೆಳಕಿನ ವಿನ್ಯಾಸದಲ್ಲಿ ನೈಪುಣ್ಯತೆಗಳಿಸಿ ವಿದೇಶದ ಸಂಭಾಂಗಣದಲ್ಲಿ ಬೆಳಕು ನಿರ್ವಹಣೆಗೆ ಹೋಗುತ್ತಿರುವ ಶಿವಮೊಗ್ಗದ ಮೊದಲ ರಂಗಕರ್ಮಿ ಶಂಕರ್ ಬೆಳಲಕಟ್ಟೆ ಇವರು, ಕುಂದಾಪುರ ರಂಗ ಅಧ್ಯಯನ ಕೇಂದ್ರದಲ್ಲಿ ರಂಗಪದವಿ ಮುಗಿಸಿಕೊಂಡು ಹತ್ತು ವರ್ಷಗಳ ಕಾಲ ಸಾಣೇಹಳ್ಳಿ ತಿರುಗಾಟದಲ್ಲಿ ಪಾಲ್ಗೊಂಡಿದ್ದರು. ಶಿವಮೊಗ್ಗದ ಎನ್ಇಎಸ್ ಶಾಲೆಯಲ್ಲಿ ರಂಗ ಶಿಕ್ಷಕನಾಗಿ ಕೆಲಸ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.