ADVERTISEMENT

ಬೆಂಗಳೂರು ಗೂಂಡಾಗಿರಿ; ಕಾಂಗ್ರೆಸ್ ಮೌನಕ್ಕೆ ಕೆ.ಎಸ್. ಈಶ್ವರಪ್ಪ ಕಿಡಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 16:48 IST
Last Updated 12 ಆಗಸ್ಟ್ 2020, 16:48 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಶಿವಮೊಗ್ಗ: ಬೆಂಗಳೂರಿನಲ್ಲಿ ನಡೆದ ಗೂಂಡಾಗಿರಿ ಪರಿಣಾಮ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ಇಂತಹ ಘಟನೆ ಖಂಡಿಸುವಲ್ಲೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಮೃದು ಧೋರಣೆ ತಳೆದಿದ್ದಾರೆ ಎಂದು ಗ್ರಾಮೀಣಾಭಿದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ಬೆಂಗಳೂರಿನಲ್ಲಿ ನಡೆದಘಟನೆಪೂರ್ವ ನಿಗದಿತವ್ಯವಸ್ಥಿತ ಸಂಚು. ಶಾಸಕರ ಮನೆಗೆ ನುಗ್ಗಿ. ದಾಂಧಲೆ ಮಾಡಿದ್ದಾರೆ. ಅಂತಹ ಗೂಂಡಾಗಳ ವರ್ತನೆ ಖಂಡಿಸಬೇಕಾದ ಸಿದ್ಧರಾಮಯ್ಯ ಹಲವು ಗಂಟೆಗಳ ಬಳಿಕ ಟ್ವೀಟ್‌ ಮಾಡಿ ಎರಡೂ ಧರ್ಮದ ಮುಖಂಡರು ಶಾಂತಿ ಸ್ಥಾಪನೆಗೆ ಪ್ರಯತ್ನಿಸಬೇಕು ಎನ್ನುತ್ತಾರೆ. ಖಂಡಿಸದೇ ಸುಮ್ಮನಿದ್ದರೆ ದುಷ್ಟರ ಜತೆ ಇದ್ದಾರೆ ಎಂಬ ಭಾವನೆ ಮೂಡುತ್ತದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

ಮುಸ್ಲಿಮರಲ್ಲಿಒಳ್ಳೆಯವರು ಇದ್ದಾರೆ. ಒಳ್ಳೆಯವರು ಇಂತಹ ಘಟನೆ ನಡೆದಾಗ ಖಂಡಿಸಬೇಕು. ಖಂಡಿಸದಿದ್ದರೆ ಇಡೀ ಸಮುದಾಯ ತಮ್ಮ ಜತೆ ಇದೆ ಎಂಬ ಭಾವನೆ ಮೂಡುತ್ತದೆ. ಮೌನ ಪುಂಡಾಟಿಕೆಗೆ ಬೆಂಬಲ ನೀಡಿದಂತೆ ಎಂದರು.

ADVERTISEMENT

ಇಂತಹ ಪುಂಡಾಟಿಕೆಗಳಿಗೆ ಸರ್ಕಾರ ಬಗ್ಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರುಉಗ್ರಗಾಮಿಗಳನ್ನೇ ಮಟ್ಟ ಹಾಕಿದ್ದಾರೆ. ರಾಜ್ಯ ಸರ್ಕಾರ ಇಂತಹ ದುಷ್ಟರನ್ನು ಬಿಡುತ್ತದೆಯೇ? ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ. ಉತ್ತರ ಪ್ರದೇಶದಲ್ಲಿ ಆಸ್ತಿಗೆ ಹಾನಿ ಮಾಡಿದವರಿಂದಲೇ ವಸೂಲಿ ಮಾಡುವ ಕಾನೂನು ರೂಪಿಸಿದಂತೆ ರಾಜ್ಯದಲ್ಲೂ ಜಾರಿಗೆ ತರಬೇಕಿದೆ. ಹಿಂಸೆ ಪ್ರಚೋಧಿಸುವ ಸಂಘಟನೆಗಳ ನಿಷೇಧ ಕುರಿತು ಚರ್ಚಿಸುವ ಅಗತ್ಯವಿದೆಎಂದು ಮಾಹಿತಿ ನೀಡಿದರು.

ಕರ್ನಾಟಕ ಶಾಂತಿಪ್ರಿಯ ರಾಜ್ಯ. ಶಾಂತಿ ಕಾಪಾಡಲು ಎಲ್ಲರೂ ಕೈಜೋಡಿಸಬೇಕು.‌ ಕಾಂಗ್ರೆಸ್ ಮುಖಂಡರುಮುಸ್ಲಿಮರ ಪರ ಎಲ್ಲದಕ್ಕೂ ಬೆಂಬಲ ನೀಡುವ ಮನೋಸ್ಥಿತಿ ತೊರೆಯಬೇಕು. ವೋಟಿನ ರಾಜಕಾರಣ ಬಿಡಬೇಕು. ಈ ವಿಷಯದಲ್ಲಿ ತಮ್ಮನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.