ADVERTISEMENT

ಮಾನಸಿಕ, ದೈಹಿಕ ಶಕ್ತಿ ಕುಂದಿಸುವ ಮಾದಕ ವಸ್ತುಗಳು: ಪ್ರೊ.ಆರ್.ಶಿವೇಶಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 11:15 IST
Last Updated 29 ಜನವರಿ 2019, 11:15 IST
ಶಿವಮೊಗ್ಗ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುಷ್ಪರಿಣಾಮಗಳ ಅರಿವು ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಆರ್‌.ಶಿವೇಶಿ ಮಾತನಾಡಿದರು.
ಶಿವಮೊಗ್ಗ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುಷ್ಪರಿಣಾಮಗಳ ಅರಿವು ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಆರ್‌.ಶಿವೇಶಿ ಮಾತನಾಡಿದರು.   

ಶಿವಮೊಗ್ಗ: ಮಾದಕ ವಸ್ತುಗಳ ನಿರಂತರ ಸೇವನೆ ಪರಿಣಾಮ ಮಾನಸಿಕ ಮತ್ತು ದೈಹಿಕ ಶಕ್ತಿ ಕುಂದುತ್ತದೆ ಎಂದು ಪ್ರಾಂಶುಪಾಲ ಪ್ರೊ.ಆರ್.ಶಿವೇಶಿ ಎಚ್ಚರಿಸಿದರು.

ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ- ಹಾಗೂ ಅಬಕಾರಿ ಇಲಾಖೆ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುಷ್ಪರಿಣಾಮಗಳ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವು ವ್ಯಕ್ತಿಗಳು, ಅಪರಾಧ ಶಕ್ತಿಗಳು ಯುವಕರ ದಾರಿ ತಪ್ಪಿಸುತ್ತಿವೆ. ಪೋಷಕರು ಕಷ್ಟದಿಪಟ್ಟು ದುಡಿದು ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾರೆ. ಉತ್ತಮ ಶಿಕ್ಷಣ ಪಡೆದ ಮಕ್ಕಳು ಉನ್ನತ ಸ್ಥಾನ ಪಡೆಯಲಿ ಎಂದು ಕನಸು ಕಂಡಿರುತ್ತಾರೆ. ಅವರ ಆಶಯ ಈಡೇರಬೇಕಾದರೆ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು. ಉತ್ತಮ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

ADVERTISEMENT

ಮಾದಕ ವ್ಯಸನಕ್ಕೆ ಒಂದು ಬಾರಿ ಬಲಿಯಾದರೆ ಅವರ ಜೀವನ ಹಾಳಾಗುತ್ತದೆ. ಹೋಗುತ್ತದೆ. ಮಾದಕ ವಸ್ತುಗಳ ವ್ಯಸನಕ್ಕೆ ಅಂಟಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಹಾದಿ ತಪ್ಪದಂತೆ ಜಾಗರೂಕರಾಗಿರಬೇಕು. ಪೋಷಕರು, ಶಿಕ್ಷಕ ಸಮೂಹ ನಿಗಾ ಇಡಬೇಕು. ದುಷ್ಟರ ಸಹವಾಸ ಮಾಡದಂತೆ ಎಚ್ಚರಿಕೆ ನೀಡಬೇಕು ಎಂದು ಸಲಹೆ ನೀಡಿದರು.

ಅಬಕಾರಿ ಇಲಾಖೆ ಉಪ ಆಯುಕ್ತ ವೈ.ಆರ್.ಮೋಹನ್, ಉಪ ಅಧೀಕ್ಷಕ ಕೆ.ಟಿ.ಧರ್ಮಪ್ಪ, ಶಶಿಧರ್, ಡಾ.ನಾಗರಾಜ್ ನಾಯ್ಕ, ಡಾ.ಸೀಮಾ, ಮಂಜುನಾಥ್, ಅಬಕಾರಿ ನಿರೀಕ್ಷಕರಾದ ಸೈಯದ್ ತಫ್ಜಲ್ ವುಲ್ಲಾ, ಮೈಲಾನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.