ADVERTISEMENT

ಕೊರೊನಾ ಸಂಕಷ್ಟಕ್ಕೆ ನೆರವಾಗುವ ಬಸವಣ್ಣನ ಚಿಂತನೆ

ಬಸವ ಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 16:38 IST
Last Updated 26 ಏಪ್ರಿಲ್ 2020, 16:38 IST
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಸರಳವಾಗಿ ಬಸವ ಜಯಂತಿ ನೆರವೇರಿತು.
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಸರಳವಾಗಿ ಬಸವ ಜಯಂತಿ ನೆರವೇರಿತು.   

ಶಿವಮೊಗ್ಗ: ಕೊರೊನಾ ಸಂಕಷ್ಟಕ್ಕೆ ಇಡೀ ಜಗತ್ತು ಸಿಲುಕಿರುವ ಈ ಸಮಯದಲ್ಲಿ ಬಸವಣ್ಣನವರು ಪ್ರತಿಪಾದಿಸಿದ ಸಕಾರಾತ್ಮಕ ಚಿಂತನೆ, ಆತ್ಮವಿಶ್ವಾಸದ ದೃಷ್ಟಿಕೋನ ಎಲ್ಲರಿಗೂ ದಾರಿದೀಪವಾಗಿದೆ ಎಂದು ಬಸವಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕುವೆಂಪು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಸರಳವಾಗಿ ಹಮ್ಮಿಕೊಂಡಿದ್ದವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಸಂಕಷ್ಟದ ಸಮಯದಲ್ಲಿ ಆತ್ಮವಿಶ್ವಾಸದಿಂದ ಹೊರಬರುವ ಮನೋಭಾವ ಸ್ವತಃ ಬಸವಣ್ಣ ರೂಢಿಸಿಕೊಂಡಿದ್ದರು. ಯುದ್ಧದಲ್ಲಿ ಹೋರಾಡುವ ಸೈನಿಕನ ಕರುಳು ಕಿತ್ತು ಬಂದರೂ ಒಂದು ಕೈಯಲ್ಲಿ ಕರುಳು, ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದು ಹೋರಾಡುತ್ತಿದ್ದರು. ಕೊನೆ ಕ್ಷಣದವರೆಗೂ ಹೋರಾಟ ನಡೆಸುವ ಆ ಕಿಚ್ಚು ಎಂತಹ ಸನ್ನಿವೇಶವನ್ನು ಎದುರಿಸುತ್ತಿತ್ತು.ಅದೇ ನಿಜವಾದ ಬದುಕಿನ ಪ್ರೀತಿ. ಅದನ್ನೇ ಬಸವಣ್ಣ ವಚನಗಳಲ್ಲಿ ತಿಳಿಸಿದ್ದಾರೆ. ಅವರ ವಚನಗಳು ಕೊರೊನಾ ಸಂಕಷ್ಟದ ಸಮಯದಲ್ಲಿನೆರವಾಗುತ್ತಿವೆಎಂದರು.

ADVERTISEMENT

ಲಂಡನ್‌ನಿಂದ ಒಂದೂವರೆ ವರ್ಷಗಳ ಹಿಂದೆ ಶಿವಮೊಗ್ಗಕ್ಕೆ ತಂದಿರುವ ಬಸವಣ್ಣನ ಪುತ್ಥಳಿ ಸ್ಥಾಪನೆಗೆ ಜಿಲ್ಲಾಡಳಿತ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ಅವರ ತತ್ವ, ಚಿಂತನೆಗಳ ಪ್ರಸಾರವಾಗಬೇಕು ಎಂದು ಕೋರಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕೊರೊನಾ ಸಂಕಷ್ಟದ ಸಮಯದಲ್ಲಿ ಬಸವಣ್ಣನವರ ಸರಳ ಬದುಕು ಎಲ್ಲರಿಗೂ ಮಾದರಿಯಾಗಿ ಕಾಣುತ್ತದೆ. ಸರಳತೆ ಇಂದಿನ ಸನ್ನಿವೇಶದ ಅನಿವಾರ್ಯವಾಗಿದೆ. ಮಠಗಳು ಹಿಂದಿನಿಂದಲೂ ನಡೆಸಿಕೊಂಡು ಬಂದದಾಸೋಹ ಪರಂಪರೆ ಇಂತಹ ಸರಳತೆ, ಸಮಾನತೆಯ ಪ್ರತೀಕ. ಎಲ್ಲರೂ ಸರಳ ಜೀವನ ನಡೆಸಿದರೆ ಎಂತಹ ಸಂಕಷ್ಟ ಕಾಲದಲ್ಲೂ ಬದುಕು ನಡೆಸಬಹುದು. ಆ ಮೂಲಕ ಹಸಿದವರಿಗೂ ಅನ್ನ ನೀಡಲು ಸಾಧ್ಯವಾಗುತ್ತದೆಎಂದು ಕಿವಿಮಾತು ಹೇಳಿದರು.

ವಿಧಾನ ಪರಿಷತ್ ಸದಸ್ಯಎಸ್.ರುದ್ರೆಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದಅಧ್ಯಕ್ಷ ಸಿ.ಎಸ್.ಷಡಕ್ಷರಿ, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್‌, ಮೇಯರ್‌ ಸುವರ್ಣ ಶಂಕರ್‌, ಉಪ ಮೇಯರ್‌ ಸುರೇಖಾ ಮುರಳೀಧರ್,ವೀರಶೈವ ಸಮಾಜದ ಅಧ್ಯಕ್ಷ ಎನ್‌.ಜೆ.ರಾಜಶೇಖರ್, ಕಾರ್ಯದರ್ಶಿ ಜಗದೀಶ್, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಎಸ್.ಎನ್‌.ರುದ್ರಮುನಿ,ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ಆನಂದ್‌, ಮಾಜಿ ಶಾಸಕ ಎಚ್‌.ಎಂ.ಚಂದ್ರಶೇಖರಪ್ಪ, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಳ್ಳೇಕೆರೆ ಸಂತೋಷ್‌,ನಗರ ಪಾಲಿಕೆ ಸದಸ್ಯಎಚ್‌.ಸಿ.ಯೋಗೀಶ್,ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ, ಹೆಚ್ಚುವರಿಜಿಲ್ಲಾಧಿಕಾರಿಜಿ.ಅನುರಾಧ, ಪಾಲಿಕೆ ಆಯುಕ್ತಚಿದಾನಂದ ವಠಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.