ADVERTISEMENT

ಹೊಳೆಹೊನ್ನೂರು: ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಮತ್ತಿಬ್ಬರ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 4:14 IST
Last Updated 23 ಜನವರಿ 2026, 4:14 IST
ಶ್ವೇತಾ
ಶ್ವೇತಾ   

ಹೊಳೆಹೊನ್ನೂರು: ಇತ್ತೀಚೆಗೆ ಭದ್ರಾ ಬಲದಂಡ ನಾಲೆಯಲ್ಲಿ ನಾಪತ್ತೆಯಾಗಿದ್ದ ನಾಲ್ವರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿವೆ.

ಶ್ವೇತಾ (23) ಹಾಗೂ ಪತಿ ಪರಶುರಾಮ್ (28) ಗುರುವಾರ ಬೆಳಿಗ್ಗೆ ಸಮೀಪದ ಸಿದ್ದಾಪುರದ ಬಳಿ ಭದ್ರಾ ನಾಲೆಯಲ್ಲಿ ಪತ್ತೆಯಾಗಿವೆ. ಇವರಿಬ್ಬರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹವನ್ನು ಪರಶುರಾಮ್ ರವರ ಸ್ವಗೃಹ ಶಿಕಾರಿಪುರ ಬೆಂಡೆಕಟ್ಟೆಗೆ ರವಾನಿಹಿಸಲಾಯಿತು. ಇತ್ತೀಚೆಗೆ ಸಮೀಪದ ಅರಬಿಳಚಿ ಗ್ರಾಮದ ಒಂದೇ ಕುಟುಂಬ ನಾಲ್ವರು ಭದ್ರಾ ಬಲದಂಡೆ ನಾಲೆಗೆ ಬಟ್ಟೆ ತೊಳೆಯಲು ಹೋದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದ ಘಟನೆ ಜರುಗಿತ್ತು.

ಸೋಮವಾರ ಮಧ್ಯಾಹ್ನದ ವೇಳೆಗೆ ರವಿಕುಮಾರ್ ರವರ ಶವ ಪತ್ತೆಯಾಗಿದ್ದು, ಬುಧವಾರ ಬೆಳಿಗ್ಗೆ ನೀಲಾಬಾಯಿ ಶವ ಪತ್ತೆಯಾಗಿತ್ತು. ಪೊಲೀಸರು, ಅಗ್ನಿಶಾಮಕ ದಳ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆಯವರ ಸತತ 5 ದಿನಗಳ ಕಾರ್ಯಚರಣೆಯಿಂದ ಮೃತ ದೇಹವನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.