ADVERTISEMENT

ಲಕ್ಕವಳ್ಳಿ | 180.7 ಅಡಿ ತಲುಪಿದ ಜಲಾಶಯ: ಭರ್ತಿಯತ್ತ ಭದ್ರೆ

ಲಕ್ಕವಳ್ಳಿ: ಭರ್ತಿಗೆ ಐದು ಅಡಿ ಮಾತ್ರ ಬಾಕಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 16:06 IST
Last Updated 28 ಜುಲೈ 2024, 16:06 IST
<div class="paragraphs"><p>ಭದ್ರಾ ಜಲಾಶಯ</p></div>

ಭದ್ರಾ ಜಲಾಶಯ

   

ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಇಲ್ಲಿನ‌ ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಭಾನುವಾರ ಬೆಳಿಗ್ಗೆ ಒಳಹರಿವು 180.7 ಅಡಿಗೆ ಏರಿಕೆಯಾಗಿದೆ.

ಜಲಾಶಯದ ಗರಿಷ್ಠಮಟ್ಟ 186 ಅಡಿ. ಆದರೆ ಸುರಕ್ಷತೆಯ ದೃಷ್ಟಿಯಿಂದ ಪ್ರತಿ ಬಾರಿ 183 ಇಲ್ಲವೇ 184 ಅಡಿಯವರೆಗೆ ಮಾತ್ರ ನೀರು ನಿಲ್ಲಿಸಲಾಗುತ್ತದೆ. ನೀರಿನ ಪ್ರಮಾಣ ಅಷ್ಟು ಏರಿಕೆ ಅಗುತ್ತಿದ್ದಂತೆಯೇ ನದಿಗೆ ನೀರು ಹರಿಸಲಾಗುವುದು ಎಂದು ಭದ್ರಾ ಜಲಾಶಯ ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮಳೆ ಕೊಂಚ ತಗ್ಗಿರುವುದರಿಂದ ಒಳಹರಿವು 35,557 ಕ್ಯುಸೆಕ್‌ಗೆ ಇಳಿಕೆಯಾಗಿದೆ. ಶನಿವಾರ 49,801 ಕ್ಯುಸೆಕ್ ದಾಖಲಿಸಿತ್ತು. 

ಕಳೆದ ಎರಡು ವರ್ಷಗಳಲ್ಲಿ ಭದ್ರೆ ಮೊದಲ ಬಾರಿಗೆ ಭರ್ತಿ ಆಗುತ್ತಿದ್ದಾಳೆ. ಹಿಂದಿನ ವರ್ಷ ಮಳೆ ಕೊರತೆಯಿಂದ ಜಲಾಶಯ ತುಂಬಿರಲಿಲ್ಲ. ಹೀಗಾಗಿ ಬೇಸಿಗೆ ಹಂಗಾಮಿನಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯಲು ರೈತರಿಗೆ ನೀರು ಕೊಟ್ಟಿರಲಿಲ್ಲ. ಈ ಬಾರಿ ಅಣೆಕಟ್ಟೆ ಭರ್ತಿಯ ಹಂತ ತಲುಪಿರುವುದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಭದ್ರಾ ಜಲಾಶಯಕ್ಕೆ ಕಳೆದ ವರ್ಷ ಇದೇ ಅವಧಿಯಲ್ಲಿ 159.6 ಅಡಿ ನೀರಿನ ಸಂಗ್ರಹ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.