ADVERTISEMENT

ಭದ್ರಾವತಿ: ಸಂಭ್ರಮದ ಶಮೀಪೂಜೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 3:46 IST
Last Updated 27 ಅಕ್ಟೋಬರ್ 2020, 3:46 IST
ಭದ್ರಾವತಿಯಲ್ಲಿ ದಸರಾ ಉತ್ಸವದ ಮೆರವಣಿಗೆಗೆ ಶಾಸಕ ಬಿ.ಕೆ.ಸಂಗಮೇಶ್ವರ ಸೋಮವಾರ ಚಾಲನೆ ನೀಡಿದರು
ಭದ್ರಾವತಿಯಲ್ಲಿ ದಸರಾ ಉತ್ಸವದ ಮೆರವಣಿಗೆಗೆ ಶಾಸಕ ಬಿ.ಕೆ.ಸಂಗಮೇಶ್ವರ ಸೋಮವಾರ ಚಾಲನೆ ನೀಡಿದರು   

ಭದ್ರಾವತಿ: ಗ್ರಾಮದೇವತೆ ಹಳದಮ್ಮ ದೇವಾಲಯ ಬಳಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ದೇವಿಗೆ ನಮಿಸಿ, ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ದಸರಾ ಉತ್ಸವದ ಮೆರವಣಿಗೆಗೆ ಶಾಸಕ ಬಿ.ಕೆ. ಸಂಗಮೇಶ್ವರ ಸೋಮವಾರ ಚಾಲನೆ ನೀಡಿದರು.

ಗ್ರಾಮದೇವತೆ ಲಕ್ಷ್ಮೀನರಸಿಂಹಸ್ವಾಮಿ ಹಾಗೂ ಕಾಳಿಕಾಪರಮೇಶ್ವರಿ ದೇವರ ಸಮ್ಮುಖದಲ್ಲಿ ಆರಂಭವಾದ ಮೆರವಣಿಗೆಯಲ್ಲಿ ಆರಕ್ಕೂ ಅಧಿಕ ಉತ್ಸವ ಮೂರ್ತಿಗಳು ಭಾಗವಹಿಸಿದ್ದವು.

ಕನಕಮಂಟಪ ಮೈದಾನದಲ್ಲಿ ಉತ್ಸವದಲ್ಲಿ ದೇವರ ಪೂಜೆ ನೆರವೇರಿದ ನಂತರ ಉಪ ವಿಭಾಗಾಧಿಕಾರಿ ಪ್ರಕಾಶ್ ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಿದರು. ನಂತರ ಬನ್ನಿ ಮುಡಿಯುವ ಧಾರ್ಮಿಕ ವಿಧಾನ ನಡೆಸಿಕೊಟ್ಟರು. ಪೌರಾಯುಕ್ತ ಮನೋಹರ್, ಕಂದಾಯಾಧಿಕಾರಿ ರಾಜಕುಮಾರ್, ಸುಹಾಸಿನಿ, ಸುಧಾಮಣಿ, ದೇವಾಲಯ ಸಮಿತಿ ಪ್ರಮುಖರಾದ ಸಂತೋಷ್, ಬಿ.ಕೆ.ಶ್ರೀನಾಥ್, ನರಸಿಂಹಾಚಾರ್, ರಮಾಕಾಂತ, ಮಂಜುನಾಥ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.