ADVERTISEMENT

ಭದ್ರಾವತಿ: ಕುರಿ ಹೊತ್ತೊಯ್ದು ಕೊಂದು ಹಾಕಿದ ಚಿರತೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 5:29 IST
Last Updated 27 ಜನವರಿ 2026, 5:29 IST
<div class="paragraphs"><p> ಚಿರತೆ</p></div>

ಚಿರತೆ

   

ಭದ್ರಾವತಿ: ತಾಲ್ಲೂಕಿನ ಗೊಂದಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ಮನೆ ಅಂಗಳದಲ್ಲಿ ಕಟ್ಟಿ ಹಾಕಿದ್ದ ಕುರಿಯನ್ನು ಎಳೆದೊಯ್ದ ಚಿರತೆ ಕೊಂದು ಹಾಕಿದೆ.

ಕುರಿಯನ್ನು ಸಮೀಪದ ಕಾಡಿಗೆ ಎಳೆದೊಯ್ದು ಅರ್ಧಂಬರ್ಧ ತಿಂದು ಹಾಕಿದೆ. 3 ದಿನದ ಹಿಂದೆಯಷ್ಟೇ ರೈತ ನರಸಿಂಹೇಗೌಡ ಅವರ ಮನೆ ಬಳಿ ಕುರಿಗಳನ್ನು ಕಟ್ಟಿದ್ದ ಕೊಟ್ಟಿಗೆ ಬಳಿ ಚಿರತೆ ಬಂದು ಕುಳಿತಿತ್ತು. ರಾತ್ರಿ ಮೂತ್ರ ವಿಸರ್ಜನೆಗೆ ಮನೆ ಹೊರಗೆ ಬಂದಿದ್ದ ನರಸಿಂಹೇಗೌಡ ಚಿರತೆ ಕಂಡು ಕೂಗಿದಾಗ ಪರಾರಿಯಾಗಿತ್ತು. 

ADVERTISEMENT

ಜ. 13 ರಂದು ಅದೇ ಗ್ರಾಮದ ಗಂಗಾನಾಯ್ಕ ಅವರ ತೋಟದ ಮನೆಯ ಅಂಗಳದಲ್ಲಿ ಮಲಗಿದ್ದ ಜರ್ಮನ್ ಶೆಫರ್ಡ್ ನಾಯಿಯ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿತ್ತು. ಗೊಂದಿ ಗ್ರಾಮದಲ್ಲಿ ಚಿರತೆ ದಾಳಿ ನಿರಂತರವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇರಿಸಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.