
ಶಿವಮೊಗ್ಗ: ಪ್ರೀತಿಸಿ ಮನೆ ಬಿಟ್ಟು ಹೋಗಿದ್ದ ಜೋಡಿಗೆ ಬೆಂಬಲ ನೀಡಿದ್ದರು ಎಂಬ ಕಾರಣಕ್ಕೆ ಹುಡುಗಿಯ ಸಹೋದರ ಹಾಗೂ ಆತನ ಸ್ನೇಹಿತರು ನಡೆಸಿದ ಹಲ್ಲೆಯಿಂದ ಭದ್ರಾವತಿಯ ಜೈ ಭೀಮ್ ನಗರದಲ್ಲಿ ಶುಕ್ರವಾರ ರಾತ್ರಿ ಇಬ್ಬರು ಮೃತಪಟ್ಟಿದ್ದಾರೆ.
ಜೈಭೀಮ್ ನಗರದ ನಿವಾಸಿಗಳಾದ ನಂದೀಶ್ ಹಾಗೂ ಸೃಷ್ಟಿ ಪರಸ್ಪರ ಪ್ರೀತಿಸುತ್ತಿದ್ದು, ಎರಡು ದಿನಗಳ ಹಿಂದೆ ಮನೆ ಬಿಟ್ಟು ಓಡಿಹೋಗಿದ್ದರು ಎಂದು ತಿಳಿದುಬಂದಿದೆ.
ಜೋಡಿ ವಾಪಸ್ ಶುಕ್ರವಾರ ಭದ್ರಾವತಿಗೆ ಬಂದಿದ್ದು, ಅಲ್ಲಿನ ಓಲ್ಡ್ ಟೌನ್ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಪಡೆದಿತ್ತು.
ತನ್ನ ಸಹೋದರಿ ನಂದೀಶನ ಜೊತೆ ಹೋಗಿದ್ದು ಖಚಿತವಾಗುತ್ತಿದ್ದಂತೆಯೇ ಅವರಿಗೆ ಮನೆ ಬಿಟ್ಟು ಹೋಗಲು ಸಹಕರಿಸಿದ್ದರು ಎಂಬ ಕಾರಣಕ್ಕೆ ಯುವತಿಯ ಸಹೋದರ ಹಾಗೂ ಸ್ನೇಹಿತರು ಸೇರಿ ನಂದೀಶನ ಸ್ನೇಹಿತ ಕಿರಣ್ ಜೊತೆ ಜಗಳವಾಡಿದ್ದಾರೆ. ಈ ವೇಳೆ ಚಾಕು ಇರಿತದಿಂದ ತೀವ್ರ ಗಾಯಗೊಂಡ ಕಿರಣ್ (25) ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಜಗಳ ಬಿಡಿಸಲು ಬಂದ ಸ್ಥಳೀಯರಾದ ಮಂಜುನಾಥ (65) ಅವರಿಗೂ ಆರೋಪಿಗಳು ಚಾಕು ಇರಿದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮಂಜುನಾಥ್ ಕೂಡ ಸಾವನ್ನಪ್ಪಿದ್ದಾರೆ.
'ಪ್ರೀತಿಸಿ ಮನೆ ಬಿಟ್ಟು ಹೋಗಿದ್ದ ಯುವಕ ಹಾಗೂ ಯುವತಿ ಇಬ್ಬರೂ ಪರಿಶಿಷ್ಟ ಸಮುದಾಯದವರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ' ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
'ಪ್ರೀತಿಸಿ ಮನೆ ಬಿಟ್ಟು ಹೋಗಿದ್ದ ಯುವಕ ಹಾಗೂ ಯುವತಿ ಇಬ್ಬರೂ ಪರಿಶಿಷ್ಟ ಸಮುದಾಯದವರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ' ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.