ADVERTISEMENT

ಕೃಷಿ ಮಸೂದೆ: ನ.31ರವರೆಗೂ ಬಿಜೆಪಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 13:30 IST
Last Updated 13 ಅಕ್ಟೋಬರ್ 2020, 13:30 IST

ಶಿವಮೊಗ್ಗ: ನೂತನ ಕೃಷಿ ಮಸೂದೆ ಉಪಯೋಗ ಕುರಿತುರೈತರಿಗೆಸೂಕ್ತ ಮಾಹಿತಿ ತಲುಪಿಸಲು ಅ.10ರಿಂದ ನ.31ರವರೆಗೆ ರಾಜ್ಯದ ಎಲ್ಲೆಡೆರೈತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆಎಂದು ರೈತ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಡಾ.ನವೀನ್ ಕುಮಾರ್ ತಿಳಿಸಿದರು.

ಅ.10ರಿಂದ ನ.10ರವರೆಗೆ ರೈತ ಮೋರ್ಚಾದ ರಾಜ್ಯ ಪದಾಧಿಕಾರಿಗಳು ತಮ್ಮ ವಿಭಾಗಗಳ ಜಿಲ್ಲಾ ಪ್ರವಾಸ ಕೈಗೊಳ್ಳುವರು. ಜಿಲ್ಲಾ ಪದಾಧಿಕಾರಿಗಳ ಸಭೆ ಹಾಗೂ ಕನಿಷ್ಠ ಜಿಲ್ಲೆಯ10 ಗ್ರಾಮಗಳ ಸಭೆಗಳಲ್ಲಿಭಾಗವಹಿಸುವಂತೆ ಸೂಚಿಸಲಾಗಿದೆ.ಅ.18ರಿಂದ 31ರವರೆಗೆ ರೈತ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾ ವ್ಯಾಪ್ತಿಯ ಎಲ್ಲ ಮಂಡಲಗಳಲ್ಲಿ ಪದಾಧಿಕಾರಿಗಳ ಸಭೆ,ಪ್ರತಿ ಮಂಡಲಗಳಲ್ಲಿ ಕನಿಷ್ಠ5 ಗ್ರಾಮ ಸಭೆಗಳು, ಅ.25ರಿಂದ 31ರವರೆಗೆ ಮಂಡಲ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಸಭೆಗಳನ್ನು ನಡೆಸುತ್ತಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಗತಿಪರ ರೈತರು, ಹೋರಾಟಗಾರರು, ವಿಚಾರವಾದಿಗಳು ಹಾಗೂ ಗ್ರಾಮದ ಪ್ರಮುಖ ವ್ಯಕ್ತಿಗಳನ್ನು ಸಂಪರ್ಕಿಸಿ ಮಸೂದೆಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ನ.10ರಿಂದ 31ರವರೆಗೆ ರೈತರ ಪರ ನಿಲುವು ತೆಗೆದುಕೊಂಡ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆರೈತರಿಂದ ಅಭಿನಂದನಾ ಪತ್ರ ಬರೆಸುವ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನ.10ರಿಂದ 31ರವರೆಗೆ ರೈತ ಜಾಗೃತಿ ಅಭಿಯಾನ ನಡೆಯಲಿದೆ ಎಂದರು.

ADVERTISEMENT

ಕೇಂದ್ರ, ರಾಜ್ಯ ಸರ್ಕಾರ ಕೃಷಿಕರ ಕಲ್ಯಾಣಕ್ಕಾಗಿ ಹಲವುಮಸೂದೆಗಳಿಗೆ ತಿದ್ದುಪಡಿ ಮಾಡಿದೆ. ರೈತರ ಆರ್ಥಿಕ ಸಬಲೀಕರಣಕ್ಕಾಗಿ ಐತಿಹಾಸಿಕ ರೈತಪರ ನಿಲುವು ತೆಗೆದುಕೊಂಡಿದೆ.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳಿಂದ ಕೃಷಿ ಉತ್ಪನ್ನಗಳ ದಾಸ್ತಾನು, ಸಂಗ್ರಹ, ಸಾಗಣೆ, ಆಹಾರ ಸಂಸ್ಕರಣೆ ಹಾಗೂ ರಫ್ತಿಗೆ ಅವಕಾಶವಿದೆ. ಎಪಿಎಂಸಿ ಮಂಡಿಗಳ ಹೊರತಾಗಿಯೂ ಬೇರೆ ಜಿಲ್ಲೆ, ಬೇರೆ ರಾಜ್ಯಗಳಲ್ಲೂ ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿರುತ್ತದೆ. ಎಪಿಎಂಸಿಗಳ ಮೇಲೆ ನಿಷೇಧಹೇರಿಲ್ಲ. ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೆಲೆ ಏರಿಕೆಯಾದರೆ ನೇರವಾಗಿ ರೈತರಿಗೆ ಲಾಭ ಸಿಗುತ್ತದೆ. ಬೆಲೆ ಕುಸಿದರೆ ಸರ್ಕಾರ ಬೆಂಬಲ ಬೆಲೆಯ ನೆರವು ಸಿಗಲಿದೆ.ಭೂಸುಧಾರಣೆ ತಿದ್ದುಪಡಿಕಾರಣ ಕೃಷಿ ಭೂಮಿ ಖರೀದಿಗೆ ಹೆಚ್ಚು ಅವಕಾಶ ಸಿಗಲಿದೆ ಎಂದು ಮಾಹಿತಿನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ,ಮಂಡೇನಕೊಪ್ಪ ಗಂಗಾಧರ್, ಕೃಷ್ಣೋಜಿರಾವ್, ಹಾಲೇಶ್, ವಿನ್ಸೆಂಟ್ ರೋಡ್ರಿಗಸ್, ಬೇಳೂರು ತಿಮ್ಮಪ್ಪ, ಕೆ.ವಿ.ಅಣ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.