ADVERTISEMENT

ಹೊಸತು ಸೃಷ್ಟಿಸುವ ಕವಿ ವಿಭಿನ್ನ: ವಿಜಯಾ ಶ್ರೀಧರ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 15:49 IST
Last Updated 15 ಜೂನ್ 2019, 15:49 IST
ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವೈದ್ಯೆ ಡಾ.ವಿನಯಾ ಶ್ರೀನಿವಾಸ್ ಅವರು ರಾಘವೇಂದ್ರ ಮೈಲಾಯ ಅವರ ‘ಭಾವಯಾನ’ ಕವನ ಸಂಕಲನ ಬಿಡುಗಡೆ ಮಾಡಿದರು.
ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವೈದ್ಯೆ ಡಾ.ವಿನಯಾ ಶ್ರೀನಿವಾಸ್ ಅವರು ರಾಘವೇಂದ್ರ ಮೈಲಾಯ ಅವರ ‘ಭಾವಯಾನ’ ಕವನ ಸಂಕಲನ ಬಿಡುಗಡೆ ಮಾಡಿದರು.   

ಶಿವಮೊಗ್ಗ: ಹೊಸದು ಸೃಷ್ಟಿಸುವ ಹಂಬಲವಿರುವ ಕವಿಗಳುರಚಿಸುವ ಕವಿತೆಗಳು ಸದಾ ವಿಭಿನ್ನವಾಗಿರುತ್ತವೆ ಎಂದು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ವಿಜಯಾ ಶ್ರೀಧರ್ ಅಭಿಪ್ರಾಯಪಟ್ಟರು.

ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೈದ್ಯ ಸಿ.ಜಿ.ರಾಘವೇಂದ್ರ ಅವರ ಚೊಚ್ಚಲ ಕವನ ಸಂಕಲನ ‘ಭಾವಯಾನ’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಪಂಚದಲ್ಲಿ ಎಲ್ಲದಕ್ಕಿಂತಲೂ ವೇಗವಾಗಿ ಸಂಚರಿಸುವುದು ಮನಸ್ಸು. ಮಹಾಭಾರತದ ಯಕ್ಷಪ್ರಶ್ನೆಗಳಿಗೆ ಅಂದೇ ಯುಧಿಷ್ಠರ ಉತ್ತರ ನೀಡಿದ್ದಾರೆ. ಇಂದು ರಾಕೇಟ್‌ ಸೇರಿ ವೇಗದ ತಂತ್ರಜ್ಞಾನಗಳು ಅಭಿವೃದ್ಧಿಯಾಗಿದ್ದರೂ, ಮನಸ್ಸಿನ ವೇಗಕ್ಕೆ ಅವು ಸಾಟಿಯಾಗುವುದೇ ಇಲ್ಲ. ರಾಘವೇಂದ್ರ ಅವರ ಕವನಗಳಲ್ಲೂ ಮನಸ್ಸಿನ ಹರಿದಾಟ ನಿರಂತರವಾಗಿದೆ. ಬುದ್ಧ, ಬಸವ, ಗಾಂಧಿ ಅವರ ಆದರ್ಶದ ಜತೆ, ಮೋದಿ, ದೇಶ ಭಕ್ತಿಯೂ ಮೂಡಿದೆ. ಬಹುತೇಕ ಕವನಗಳು ಹೊಸತನದಿಂದ ಕೂಡಿವೆ ಎಂದು ಬಣ್ಣಿಸಿದರು.

ADVERTISEMENT

ಪುಸ್ತಕ ಬಿಡುಗಡೆ ಮಾಡಿದ ಸುಬ್ಬಯ್ಯ ಆಸ್ಪತ್ರೆಯ ಡಾ.ವಿನಯಾ ಶ್ರೀನಿವಾಸ್, ಕವನಗಳು ಬದುಕಿನ ಮೌಲ್ಯಗಳನ್ನು ಒಳಗೊಂಡಿವೆ. ಭಾಷಾ ಪ್ರೌಢಿಮೆ, ಸೃಜನಶೀಲತೆ ಕಾಣಬಹುದು ಎಂದರು.

ಸಾಹಿತಿ ಡಾ.ಕಿರಣ್ ದೇಸಾಯಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂಕರಪ್ಪ, ಲೇಖಕ ಡಾ.ರಾಘವೇಂದ್ರ ಮೈಲಾಯ, ಡಾ.ಶುಭಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.