ADVERTISEMENT

ಮೀಸಲಾತಿ ತೀರ್ಪಿಗೆ ಬಿಎಸ್‌ಪಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 13:38 IST
Last Updated 14 ಫೆಬ್ರುವರಿ 2020, 13:38 IST

ಶಿವಮೊಗ್ಗ: ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರಿಂಕೋರ್ಟ್ ತೀರ್ಪಿನವಿರುದ್ಧ ಜಿಲ್ಲಾಬಹುಜನ ಸಮಾಜಪಕ್ಷ(ಬಿಎಸ್‌ಪಿ)ಅಸಮಾಧಾನ ವ್ಯಕ್ತಪಡಿಸಿದೆ.

ಪರಿಶಿಷ್ಟ ಜಾತಿ, ಪಂಗಡ ಸಮುದಾಯಗಳಿಗೆ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ತೀರ್ಪುಸಂವಿಧಾನ ಆಶಯಕ್ಕೆ ವಿರುದ್ಧ. ಬಿಜೆಪಿ ಸಿದ್ದಾಂತಕ್ಕೆ ಪೂರಕ.ನ್ಯಾಯಾಲಯಗಳ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಧಕ್ಕೆ ತಂದಿದೆ ಎಂದುಪಕ್ಷದಜಿಲ್ಲಾ ಸಂಯೋಜಕ ಜಿ.ಸಂಗಪ್ಪ ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿದೂರಿದರು.

ಹಿಂದೆ ಸುಪ್ರಿಂ ಕೋರ್ಟ್‌ನ 7 ನ್ಯಾಯಾಧೀಶರ ಪೀಠ ಬಡ್ತಿ ಮೀಸಲಾತಿ ಪರವಾಗಿ ತೀರ್ಪು ನೀಡಿದೆ. ಈಗಿನ ತೀರ್ಪು ವ್ಯತಿರಿಕ್ತವಾಗಿದೆ.ಇದು ವಿರೋಧಭಾಸ.ಈ ತೀರ್ಪಿನಹಿಂದೆ ಮೀಸಲಾತಿ ವಿರುದ್ಧದ ಒಂದು ವ್ಯವಸ್ಥಿತ ಸಂಚು ಇದೆ ಎಂದು ಆರೋಪಿಸಿದರು.

ADVERTISEMENT

ಲೋಕಸಭೆಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ 117ನೇ ತಿದ್ದುಪಡಿ ಮಸೂದೆ ಇಚ್ಚಾಶಕ್ತಿಕೊರತೆ ಕಾರಣಇತ್ಯರ್ಥವಾಗದೇ ಉಳಿದಿದೆ. ಈ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಿ,ಅನುಮೋದನೆ ನೀಡಬೇಕು.ಪರಿಶಿಷ್ಟ ಹಿತ ಕಾಯಬೇಕು. ಇಲ್ಲದಿದ್ದರೆ ಹೋರಾಟಅನಿವಾರ್ಯ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿಜಿಲ್ಲಾ ಘಟಕದ ಅಧ್ಯಕ್ಷ ಎ.ಡಿ.ಶಿವಪ್ಪ, ಪದಾಧಿಕಾರಿಗಳಾದ ಎಚ್.ಎನ್.ಶ್ರೀನಿವಾಸ್, ಲಕ್ಷ್ಮೀಪತಿ, ನರಸಪ್ಪ, ಎಚ್.ಎನ್.ಚಂದ್ರಪ್ಪ, ಎಸ್.ಎಚ್.ಮಾರುತಿ, ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.