ADVERTISEMENT

ಮಲೆನಾಡಿನ ರೈತರ ರಕ್ಷಣೆಗೆ ಮುಂದಾದ ಸರ್ಕಾರ

ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 13:28 IST
Last Updated 13 ಮಾರ್ಚ್ 2020, 13:28 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿವಮೊಗ್ಗ: ಸರ್ಕಾರಭೂ ಕಂದಾಯ ಕಾಯ್ದೆ 2007ಕ್ಕೆ ತಿದ್ದುಪಡಿತರುವ ಮೂಲಕಮಲೆನಾಡಿನ ಸಣ್ಣ ರೈತರ ರಕ್ಷಣೆನೀಡಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರಮಾಹಿತಿ ನೀಡಿದರು.

2007ರಕಾಯ್ದೆಯಿಂದರೈತರಿಗೆ ತೊಂದರೆಯಾಗಿದೆ.ನಗರ ಪ್ರದೇಶದ ಭೂ ಕಬಳಿಕೆದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಈ ಕಾಯ್ದೆ ಜಾರಿಗೆತರಲಾಗಿತ್ತು.ಇದರಿಂದ ಮಲೆನಾಡು ಭಾಗದಲ್ಲಿಸಾಗುವಳಿಮಾಡಿದ ರೈತರಿಗೆ ತೊಂದರೆಯಾಗಿದೆ. ತಿದ್ದುಪಡಿ ತರುವ ಮೂಲಕ ಅರಣ್ಯ, ಕಂದಾಯ ಭೂಮಿಗಳಲ್ಲಿ 4 ಎಕರೆಗಿಂತ ಕಡಿಮೆ ಉಳುಮೆ ಮಾಡಿದ ಬಗರ್ಹುಕುಂ ಸಾಗುವಳಿದಾರರಿಗೆ ರಕ್ಷಣೆ ನೀಡಲಾಗುವುದು. ಇದರಿಂದ ಸೊಪ್ಪಿನಬೆಟ್ಟ, ಕಾಫಿತೋಟಗಳು, ಅಡಿಕೆ ತೋಟಗಳ ರೈತರಿಗೆಅನುಕೂಲವಾಗಲಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಬೆಂಗಳೂರಿನಲ್ಲಿ ಈಗಾಗಲೇ ಮುಖ್ಯಮಂತ್ರಿಅಧ್ಯಕ್ಷತೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತುಉನ್ನತಮಟ್ಟದ ಸಭೆ ನಡೆದಿದೆ. ಮಲೆನಾಡಿನ ರೈತರ ಮೇಲೆಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ.ಶೀಘ್ರ ಸದನದಅನುಮೋದನೆದೊರೆಯಲಿದೆ ಎಂದರು.

ADVERTISEMENT

ಭೂ ನ್ಯಾಯಾಲಯದಲ್ಲಿ 4,725 ರೈತರ ವಿರುದ್ಧ ಪ್ರಕರಣ ದಾಖಲಾಗಿದೆ.15 ದಿನಕ್ಕೆ ಒಮ್ಮೆ ವಿಚಾರಣೆಗೆ ಬರುವಂತೆ ಆದೇಶ ನೀಡಲಾಗುತ್ತಿದೆ. ದೂರದ ಊರುಗಳಿಂದ ಬೆಂಗಳೂರಿಗೆ ಬರಲು ಸಮಸ್ಯೆಯಾಗುತ್ತದೆ.ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ವಿಚಾರಣೆಗೆ ಅನುಮತಿ ನೀಡುವುದು, 4 ಎಕರೆಗಿಂತ ಕಡಿಮೆ ಸಾಗುವಳಿ, ಕೊಟ್ಟಿಗೆ, ಕಣ, ವಾಸದ ಮನೆಗಾಗಿ ಒತ್ತುವರಿಗೆ ಕಾನೂನು ಸಮ್ಮತಿ ದೊರಕಿಸುವುದುತಿದ್ದುಪಡಿಯ ಉದ್ದೇಶ ಎಂದು ವಿವರ ನೀಡಿದರು.

ನಗರ ಪ್ರದೇಶದ ಒತ್ತುವರಿ, ಹೊಸ ಬಡಾವಣೆ,ಕೆರೆಗಳ ಒತ್ತುವರಿಗೆ ವಿನಾಯಿತಿ ಇಲ್ಲ. ಚಿಕ್ಕಮಗಳೂರು ಭಾಗದಲ್ಲಿ ನೂರಾರು ಎಕರೆ ಒತ್ತುವರಿ ಮಾಡಿಕೊಂಡವರಿಗೆ ಈಕಾನೂನು ಅನ್ವಯಿಸುವುದಿಲ್ಲಎಂದು ಸ್ಪಷ್ಟಪಡಿಸಿದರು.

ಹೊಸ ಸಮಸ್ಯೆಗಳು ಎದುರಾದರೆ ಸಮರ್ಥವಾಗಿಎದುರಿಸಲು ಮಲೆನಾಡು ಭಾಗದ ಜಿಲ್ಲೆಗಳಲ್ಲಿ 10 ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಈ ಅಧಿಕಾರಿಗಳ ಮೇಲುಸ್ತುವಾರಿಗೆಐಎಎಸ್ ಅಧಿಕಾರಿಇರುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿಬಿಜೆಪಿ ಮುಖಂಡರಾದಎಸ್.ದತ್ತಾತ್ರಿ, ಮೇಘರಾಜ್, ಶ್ರೀನಾಥ್, ಎಸ್.ಎಸ್.ಜ್ಯೋತಿ ಪ್ರಕಾಶ್, ಸುನಿತಾ ಅಣ್ಣಪ್ಪ, ಮಾಲತೇಶ್, ಋಷಿಕೇಷ್ ಪೈ, ವೀರಭದ್ರಪ್ಪ ಪೂಜಾರ್, ಕೆ.ವಿ.ಅಣ್ಣಪ್ಪ , ರತ್ನಾಕರ ಶೆಣೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.