ADVERTISEMENT

ಜಾತಿ ಪ್ರಮಾಣಪತ್ರ ರದ್ದು ಪ್ರಕರಣಕ್ಕೆ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 20 ಮೇ 2020, 14:05 IST
Last Updated 20 ಮೇ 2020, 14:05 IST

ಸಾಗರ: ತಾಲ್ಲೂಕು ಪಂಚಾಯಿತಿ ಸದಸ್ಯೆ ಆನಂದಿ ಲಿಂಗರಾಜ್ ಅವರ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿ ಶಿವಮೊಗ್ಗದ ಜಿಲ್ಲಾಧಿಕಾರಿ ಮಾ.21ರಂದು ಹೊರಡಿಸಿದ ಆದೇಶಕ್ಕೆ ರಾಜ್ಯದ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.

ಆನಂದಿ ಲಿಂಗರಾಜ್ ಅವರು ತಮ್ಮ ಜಾತಿ ಪ್ರಮಾಣಪತ್ರ ಪಡೆಯುವಾಗ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ತಪ್ಪು ಮಾಹಿತಿ ನೀಡಿರುವುದು ದೃಢಗೊಂಡಿದೆ ಎಂದು ಆದೇಶಿಸಿದ್ದರು. ಸದರಿ ಆದೇಶದ ಆಧಾರದ ಮೇರೆಗೆ ತಹಶೀಲ್ದಾರ್‌ ಅವರ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿದ್ದರು.

ಜಿಲ್ಲಾಧಿಕಾರಿ, ತಹಶೀಲ್ದಾರರ ಈ ಆದೇಶವನ್ನು ಆನಂದಿ ಲಿಂಗರಾಜ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸುವ ಮೂಲಕ ಪ್ರಶ್ನಿಸಿದ್ದರು. ಜಿಲ್ಲಾಧಿಕಾರಿ ಅವಶ್ಯ ಪಕ್ಷದಾರರ ಗೈರು ಹಾಜರಾತಿಯಲ್ಲಿ ವಿಚಾರಣೆ ನಡೆಸಿ ಆದೇಶಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಅವರ ಆದೇಶಕ್ಕೆ ನ್ಯಾಯಾಲಯ ನಾಲ್ಕು ವಾರಗಳ ಕಾಲ ತಡೆಯಾಜ್ಞೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.