ADVERTISEMENT

ಶಿಕಾರಿಪುರ | ಮಹಿಳೆ ಮೇಲೆ ಹಲ್ಲೆ ಆರೋಪ: ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 11:26 IST
Last Updated 10 ನವೆಂಬರ್ 2023, 11:26 IST
<div class="paragraphs"><p>ಹಲ್ಲೆ</p></div>

ಹಲ್ಲೆ

   

ಶಿಕಾರಿಪುರ: ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ವೀರೇಂದ್ರ ಪಾಟೀಲ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.

ಅರಿಸಿಣಗೆರೆ ಗ್ರಾಮದ ನಿವಾಸಿ ಶೋಭಾ ದೂರು ನೀಡಿದ ಮಹಿಳೆ. ಆದರೆ ಮಹಿಳೆ ಮನೆಯವರೇ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಮೇಲೆ ಹಾಗೂ ನನ್ನ ಅತ್ತಿಗೆ ಮೇಲೆ ನಡೆಸಿದ್ದಾರೆ ಎಂದು ಆರೋಪಿಸಿ ವೀರೇಂದ್ರ ಮಹಿಳೆ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.

ADVERTISEMENT

ಘಟನೆ ವಿವರ: ತಾಲ್ಲೂಕಿನ ಅರಿಸಿಣಗೆರೆ ಗ್ರಾಮದಲ್ಲಿ ವೀರೇಂದ್ರ ಪಾಟೀಲ್ ಹಾಗೂ ಶೋಭಾ ಅಕ್ಕಪಕ್ಕದ ಮನೆ ನಿವಾಸಿಯಾಗಿದ್ದಾರೆ. ನ.6ರಂದು ವೀರೇಂದ್ರ ಪಾಟೀಲ್ ಮನೆ ಪಕ್ಕ ನೀರಿನ ಪೈಪ್ ಅಳವಡಿಸುವ ಸಂದರ್ಭದಲ್ಲಿ ಪೈಪ್ ಅಳವಡಿಸುತ್ತಿರುವ ಜಾಗ ನಮ್ಮ ಮನೆಗೆ ಸೇರಿದ್ದು ಎಂದು ಶೋಭಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ವಾಗ್ವಾದ ಸಂಭವಿಸಿದ್ದು ಗಲಾಟೆ ನಡೆದಿದೆ. ಈ ಗಲಾಟೆಗೆ ಸಂಬಂಧಿಸಿದಂತೆ ನ.7ರಂದು ಶೋಭಾ ಹಾಗೂ ವೀರೇಂದ್ರ ಪಾಟೀಲ್ ಪರಸ್ಪರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗ್ರಾಮಾಂತರ ಠಾಣೆ ಪೊಲೀಸರು ಗಲಾಟೆಗೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ನ.6ರಂದು ವೀರೇಂದ್ರ ಪಾಟೀಲ್ ಹಾಗೂ ಶೋಭಾ ಅವರ ಮಧ್ಯೆ ನಡೆದ ಗಲಾಟೆಯ ವಿಡಿಯೊ ನ.10ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪರಿಣಾಮ ಗಲಾಟೆ ಪ್ರಕರಣ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.