ADVERTISEMENT

ದಾನದಿಂದ ಪುಣ್ಯ ಪ್ರಾಪ್ತಿ: ಮೂಲೆಗದ್ದೆ ಚನ್ನಬಸವ ಸ್ವಾಮೀಜಿ.

ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:41 IST
Last Updated 15 ನವೆಂಬರ್ 2025, 6:41 IST
ಹೊಸನಗರ ಪಟ್ಟಣದ ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಮೂಲೆಗದ್ದೆ ಅಭಿನವ ಚನ್ನಬಸವ ಸ್ವಾಮೀಜಿ ಶಂಕುಸ್ಥಾಪನೆ ನೆರವೇರಿಸಿದರು 
ಹೊಸನಗರ ಪಟ್ಟಣದ ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಮೂಲೆಗದ್ದೆ ಅಭಿನವ ಚನ್ನಬಸವ ಸ್ವಾಮೀಜಿ ಶಂಕುಸ್ಥಾಪನೆ ನೆರವೇರಿಸಿದರು    

ಹೊಸನಗರ: ‘ಪ್ರತಿಯೊಬ್ಬರೂ ತಮ್ಮ ದುಡಿಮೆಯ ಒಂದು ಭಾಗವನ್ನು ಪರೋಪಕಾರಕ್ಕೆ ದಾನ ಮಾಡಿದಲ್ಲಿ ಮಾತ್ರವೇ ಕಲಿಯುಗದಲ್ಲಿ ಪುಣ್ಯ ಪ್ರಾಪ್ತಿಯಾಗುವುದು’ ಎಂದು ಮೂಲೆಗದ್ದೆ ಸದಾಶಿವ ಶಿವಯೋಗಶ್ರಮದ ಪೀಠಾಧ್ಯಕ್ಷ ಅಭಿನವ ಚನ್ನಬಸವ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಮಾವಿನಕೊಪ್ಪ ಗ್ರಾಮದಲ್ಲಿ ₹ 3 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಗಂಗಾಧರೇಶ್ವರ ಹಾಗೂ ವಿವಿಧ ಪರಿವಾರ ದೇವರ ನೂತನ ದೇವಸ್ಥಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಆಶೀರ್ವಚನ ನೀಡಿದರು.

‘ಪ್ರತಿಯೊಬ್ಬರೂ ತಾವು ಗಳಿಸಿದನ್ನು ಸಕಾರ್ಯಗಳಿಗೆ ಬಳಸಬೇಕು. ಇಡೀ ವಿಶ್ವದಲ್ಲಿ ಭಕ್ತಿಗೆ ಒಲಿಯುವನು ಎಂದರೆ ದೇವರು ಮಾತ್ರವೇ. ಸದಾಚಾರ, ಸದ್ಭಕ್ತಿಯಿಂದಲೇ ದೈವಕೃಪೆ ಪ್ರಾಪ್ತಿಯ ಸನ್ಮಾರ್ಗ’ ಎಂದು ಹೇಳಿದರು.

ADVERTISEMENT

ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್, ಉದ್ಯಮಿ ಮಹೇಂದ್ರ, ಹಿರಿಯರಾದ ಶ್ರೀನಿವಾಸ್ ಕಾಮತ್, ನಿತಿನ್ ನಾರಾಯಣ್, ಸುರೇಶ ಆಚಾರ್ಯ ಇದ್ದರು. ದೇಗುಲ ನಿರ್ಮಾಣಕ್ಕೆ ದೇಣಿಗೆ ನೀಡಿದ ಅನೇಕರನ್ನು ದೇವಸ್ಥಾನ ಆಡಳಿತ ಸಮಿತಿ ಪರವಾಗಿ ಸ್ವಾಮೀಜಿ ಸನ್ಮಾನಿಸಿದರು.
ಸುಜಾತಾ ಸುರೇಶ ಕಾರ್ಯಕ್ರಮ ನಿರೂಪಿಸಿದರು. ಗೌತಮ್ ಕುಮಾರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.