ADVERTISEMENT

ಬ್ಯಾಂಕ್ ವ್ಯವಸ್ಥಾಪಕರ ಸೋಗಿನಲ್ಲಿ ವಂಚನೆ, ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 14:32 IST
Last Updated 30 ಮಾರ್ಚ್ 2020, 14:32 IST

ಶಿವಮೊಗ್ಗ: ಬ್ಯಾಂಕ್ ವ್ಯವಸ್ಥಾಪಕ ಎಂದು ಗ್ರಾಹಕರಿಂದ ಒಟಿಪಿ ಪಡೆದು ₹48,898 ಡ್ರಾ ಮಾಡಿದ ಪ್ರಕರಣ ಸಂಬಂಧ ಭದ್ರಾವತಿ ಹೊಸಮನೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸಮನೆಯ ವಿಶ್ವನಾಥ್ ಜೋಷಿ ಅವರ ಮೊಬೈಲ್ ನಂಬರ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ವಿಜಯಾ ಬ್ಯಾಂಕ್ ವ್ಯವಸ್ಥಾಪಕ ಎಂದು ನಂಬಿಸಿದ್ದಾನೆ. ನಿಮ್‌ ಎಟಿಎಂ ಲಾಕ್‌ ಆಗಿದೆ ಸರಿಪಡಿಸಬೇಕು ಎಂದು ಒಟಿಪಿ ಪಡೆದು 6 ಬಾರಿ ಹಣ ಡ್ರಾ ಮಾಡಿಕೊಂಡಿದ್ದಾನೆ.

58 ಬೈಕ್‌ ವಶ

ADVERTISEMENT

ಜಿಲ್ಲೆಯಲ್ಲಿ ಕೊರೊನಾ ನಿರ್ಬಂಧಗಳನ್ನು ಉಲ್ಲಂಘಿಸಿ ಸೋಮವಾರ ಹೊರಗೆ ಸುತ್ತಾಡುತ್ತಿದ್ದ 58 ದ್ವಿಚಕ್ರ ವಾಹನಗಳನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸುಳ್ಳು ವದಂತಿ, ಎಚ್ಚರಿಕೆ

ಜಿಲ್ಲೆಯಲ್ಲಿ ಮಾರ್ಚ್ 31ರಂದು ಸಂಪೂರ್ಣ ಬಂದ್‌ ಇದೆ. ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಧ್ವನಿ ಸಂದೇಶ ಮುದ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದು ಸತ್ಯವಿಲ್ಲದ ಸಂದೇಶ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಸ್ಪಷ್ಟಪಡಿಸಿದ್ದಾರೆ. ಇಂತಹ ಸುಳ್ಳು ವದಂತಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.