ADVERTISEMENT

ಬಾಲ್ಯದಲ್ಲಿ ಮದುವೆ ಶಿಕ್ಷಾರ್ಹ ಅಪರಾಧ: ಹಿರಿಯ ನ್ಯಾಯಾಧೀಶೆ ಗೀತಾಮಣಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 4:20 IST
Last Updated 25 ಜನವರಿ 2026, 4:20 IST
ಬಸವಾನಿ ಸರ್ಕಾರಿ ಪ್ರೌಢಶಾಲೆಯಲ್ಲಿ ನ್ಯಾಯಾಧೀಶೆ ಗೀತಾಮಣಿ ಮಾತನಾಡಿದರು
ಬಸವಾನಿ ಸರ್ಕಾರಿ ಪ್ರೌಢಶಾಲೆಯಲ್ಲಿ ನ್ಯಾಯಾಧೀಶೆ ಗೀತಾಮಣಿ ಮಾತನಾಡಿದರು   

ತೀರ್ಥಹಳ್ಳಿ: ಬಡತನ, ಅನಕ್ಷರತೆ ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣ. ಸಮುದಾಯ, ಪೋಷಕರು ಮಕ್ಕಳ ಮದುವೆ ಮಾಡಿದರೆ ಅದು  ಶಿಕ್ಷಾರ್ಹ ಅಪರಾಧವಾಗಲಿದೆ. ಬಾಲ್ಯವಿವಾಹ ತಡೆಗಟ್ಟಲು ಎಲ್ಲರೂ ಶ್ರಮಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಗೀತಾಮಣಿ ಹೇಳಿದರು.

ಶುಕ್ರವಾರ ಬಸವಾನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಬಾಲ್ಯ ವಿವಾಹ, ಮೋಟಾರ್‌ ಕಾಯ್ದೆ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹೆಣ್ಣಿನ ವಿದ್ಯಾಭ್ಯಾಸದ ಹಕ್ಕನ್ನು ಬಾಲ್ಯವಿವಾಹ ಹಾಳು ಮಾಡುತ್ತಿದೆ. ವಿದ್ಯೆ ಇಲ್ಲದಿದ್ದರೆ ಉತ್ತಮ ಬದುಕು ಕಟ್ಟಿಕೊಳ್ಳುವುದು ಕಷ್ಟ. ಬಾಲ್ಯದಲ್ಲಿ ತಾಯಿಯಾದರೆ ಅದು ಅವರ ದೀರ್ಘ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಗಂಡು ಮಕ್ಕಳು 18 ವರ್ಷಕ್ಕಿಂತ ಮುಂಚಿತವಾಗಿ ವಾಹನಗಳನ್ನು ಚಾಲನೆ ಮಾಡಬಾರದು. ಪೋಷಕರೂ ವಾಹನಗಳನ್ನು ಮಕ್ಕಳಿಗೆ ನೀಡಬಾರದು ಎಂದು ಸಲಹೆ ನೀಡಿದರು.

ADVERTISEMENT

ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ರಮೇಶ್‌, ಸರ್ಕಾರಿ ಅಭಿಯೋಜಕ ಸಂತೋಷ್‌ ಕುಮಾರ್‌, ವಕೀಲ ಎಚ್.ಎಸ್. ಸತೀಶ್‌ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್‌, ಮುಖ್ಯಶಿಕ್ಷಕಿ ಜಯಲಕ್ಷ್ಮೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.