ADVERTISEMENT

ಶಿವಮೊಗ್ಗದಲ್ಲಿ ದ್ವಿಶತಕ ದಾಟಿದ ಕೊರೊನಾ ವೈರಸ್‌ ಸೋಂಕಿತರು

ಎರಡು ದಿನಗಳ ಹಿಂದೆ ಮೃತಪಟ್ಟಿದ್ದ ತುಂಗಾ ನಗರದ ವೃದ್ಧೆಗೆ ಪಾಸಿಟಿವ್

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 4:32 IST
Last Updated 4 ಜುಲೈ 2020, 4:32 IST
   

ಶಿವಮೊಗ್ಗ: ಕೊರೊನಾ ವೈರಸ್‌ನಿಂದ ತುಂಗಾನಗರದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.ಎರಡು ದಿನಗಳ ಹಿಂದೆಯೇಮೃತಪಟ್ಟಿದ್ದ ವೃದ್ಧೆಯಲ್ಲಿ ವೈರಸ್‌ ಇತ್ತು ಎನ್ನುವ ಅಂಶಶುಕ್ರವಾರ ದೃಢಪಟ್ಟಿದೆ.ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೇರಿದೆ.

ಮೃತ ವೃದ್ಧೆ‌(ಪಿ–18073)ಗೆ ನಾಲ್ಕು ದಿನಗಳ ಹಿಂದೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ಪಾಸಿಟಿವ್ ಇರುವುದು ದೃಢಪಟ್ಟ ನಂತರ ವೃದ್ಧೆ ನೆಲೆಸಿದ್ದ ಪ್ರದೇಶದಲ್ಲಿ ಸ್ಯಾನಿಟೈಸಿಂಗ್ ಮಾಡಲಾಯಿತು.

ಒಂದೇ ದಿನ ಜಿಲ್ಲೆಯ 23 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ದ್ವಿಶತಕ ದಾಟಿ ಮುಂದುವರಿದಿದೆ.ಸೋಂಕಿತರಲ್ಲಿ 11 ಮಹಿಳೆಯರು, 11 ಪುರುಷರು ಹಾಗೂ ಒಬ್ಬ ಬಾಲಕ ಇದ್ದಾನೆ.

ADVERTISEMENT

42 ವರ್ಷದ ಮಹಿಳೆ ‌(ಪಿ–18066), 46 ವರ್ಷದ ಪುರುಷ ‌(ಪಿ–18067), 24 ವರ್ಷದ ಯುವತಿ ‌(ಪಿ–18068), 67 ವರ್ಷದ ಪುರುಷ ‌(ಪಿ–18069), 33 ವರ್ಷದ ಪುರುಷ ‌(ಪಿ–18070),70 ವರ್ಷದ ಮಹಿಳೆ ‌(ಪಿ–18073),33 ವರ್ಷದ ಪುರುಷ ‌(ಪಿ–18075), 44 ವರ್ಷದ ಪುರುಷ ‌(ಪಿ–18077), 25 ವರ್ಷದ ಯುವಕ (ಪಿ–18081), 34 ವರ್ಷದ ಪುರುಷ (ಪಿ–18082), 55 ವರ್ಷದ ಮಹಿಳೆ (ಪಿ–18083)ಗೆ ವೈರಸ್‌ ತಗುಲಿದಸಂಪರ್ಕ ಪತ್ತೆಯಾಗಿಲ್ಲ.

33 ವರ್ಷದ ಪುರುಷ ‌(ಪಿ–18076), 28 ವರ್ಷದ ಯುವಕ (ಪಿ–18084), 22 ವರ್ಷದ ಯುವತಿ (ಪಿ–18086),19 ವರ್ಷದ ಯುವತಿ (ಪಿ–18087),51 ವರ್ಷದ ಮಹಿಳೆ (ಪಿ–18088). ಬೆಂಗಳೂರಿನಿಂದ,70 ವರ್ಷದ ಮಹಿಳೆ ‌(ಪಿ–18074) ಮಹಾರಾಷ್ಟ್ರದಿಂದ ಹಿಂದಿರುಗಿದವರು.19 ವರ್ಷದ ಯುವತಿ (ಪಿ–18085) ಉತ್ತರ ಪ್ರದೇಶದಿಂದ ಜಿಲ್ಲೆಗೆ
ಬಂದಿದ್ದಾರೆ.

ಪಿ–9897 ರೋಗಿಯ ಸಂಪರ್ಕದಿಂದ30 ವರ್ಷದ ಪುರುಷ ‌(ಪಿ–18071), 27 ವರ್ಷದ ಯುವಕ ‌(ಪಿ–18072)ನಿಗೆ,ಪಿ–10828 ರೋಗಿಯ ಸಂಪರ್ಕದಿಂದ59 ವರ್ಷದ ಮಹಿಳೆಗೆ ‌(ಪಿ–18078),37 ವರ್ಷದ ಮಹಿಳೆ ‌(ಪಿ–18079),10 ವರ್ಷದ ಬಾಲಕನಿಗೆ ‌(ಪಿ–18080) ಸೋಂಕು ತಗುಲಿದೆ.

ಒಟ್ಟು 222 ಜನರು ಸೋಕಿತರಾಗಿದ್ದು, ಇದುವರೆಗೆ 117 ಜನರು ಗುಣ ಮುಖರಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. 101 ಮಂದಿ ಮೆಗ್ಗಾನ್ ಆಸ್ಪತ್ರೆಯ ಕೋವಿಡ್‌ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗ10, ಭದ್ರಾವತಿ5, ಶಿಕಾರಿಪುರ4 ಜನರಿಗೆ, ತೀರ್ಥಹಳ್ಳಿ. ಹೊಸನಗರ, ಸೊರಬ, ಸಾಗರದಲ್ಲಿತಲಾ ಒಬ್ಬರಿಗೆ ಸೋಂಕು ಇರುವುದು
ಖಚಿತವಾಗಿದೆ.

40 ಕಂಟೈನ್‌ಮೆಂಟ್‌ ಝೋನ್: ಕೋವಿಡ್‌ ರೋಗಿಗಳು ನೆಲೆಸಿದ್ದ ಜಿಲ್ಲೆಯ ವಿವಿಧ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.
ಇದುವರೆಗೂ ಒಟ್ಟು 40 ಕಂಟೈನ್‌ಮೆಂಟ್‌ ಝೋನ್‌ಗಳನ್ನು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.