ADVERTISEMENT

ಶಿವಮೊಗ್ಗ | ಮತ್ತೊಬ್ಬ ಪೊಲೀಸ್‌ಗೆ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 14:56 IST
Last Updated 19 ಜೂನ್ 2020, 14:56 IST

ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರ42 ವರ್ಷದಪುರುಷನಿಗೆ(ಪಿ–8063)ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 107ಕ್ಕೇರಿದೆ.

ಇವರು ಬೆಂಗಳೂರಿನಿಂದ ಬಂದೋಬಸ್ತ್‌ ಕಾರ್ಯಕ್ಕೆ ತೆರಳಿ, ಮರಳಿ ಬಂದಿದ್ದ ರಾಜ್ಯ ಮೀಸಲು ಪೊಲೀಸ್‌ ತಂಡದ ಸದಸ್ಯ. ನಗರದ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. 107 ಸೋಂಕಿತರಲ್ಲಿ 69ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. 37ಮಂದಿ ಮೆಗ್ಗಾನ್ ಆಸ್ಪತ್ರೆ ಕೋವಿಡ್‌ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT