ADVERTISEMENT

ಕೊರೊನಾ: ಒಂದೇ ದಿನ 37 ಜನರು ಗುಣಮುಖ

762ಕ್ಕೇರಿದ ಸೋಂಕಿತರ ಸಂಖ್ಯೆ, 236 ಕಂಟೈನ್ಮೆಂಟ್ ಜೋನ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 14:25 IST
Last Updated 17 ಜುಲೈ 2020, 14:25 IST
ಶಿವಮೊಗ್ಗದ ಸವಳಂಗ ರಸ್ತೆ ಶುಕ್ರವಾರ ಮಧ್ಯಾಹ್ನದ ನಂತರ ನಿರ್ಜನವಾಗಿತ್ತು.
ಶಿವಮೊಗ್ಗದ ಸವಳಂಗ ರಸ್ತೆ ಶುಕ್ರವಾರ ಮಧ್ಯಾಹ್ನದ ನಂತರ ನಿರ್ಜನವಾಗಿತ್ತು.   

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ 37 ಜನರು ಗುಣಮುಖರಾಗಿದ್ದು ಶುಕ್ರವಾರ ಮನೆಗೆ ಮರಳಿದರು. ಒಟ್ಟು 317 ಜನರು ಇದುವರೆಗೂ ಸಂಪೂರ್ಣ ಗುಣಮುಖರಾಗಿದ್ದಾರೆ.

60 ಜನರಿಗೆ ಶುಕ್ರವಾರಸೋಂಕು ಇರುವುದು ಗಂಟಲು ದ್ರವ ಪರೀಕ್ಷೆಯಿಂದ ದೃಢಪಟ್ಟಿದೆ. ಅವರಲ್ಲಿ ಶಿವಮೊಗ್ಗ ನಗರದಲ್ಲೇ 20 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಶಿಕಾರಿಪುರ 18, ಸಾಗರ 7, ತೀರ್ಥಹಳ್ಳಿ 6, ಭದ್ರಾವತಿ 5, ಹೊಸನಗರ2, ಸೊರಬದ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ಇಲ್ಲಿನ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಚಿತ್ರದುರ್ಗ ಜಿಲ್ಲೆಯ ಒಬ್ಬರಲ್ಲೂ ಸೋಂಕು ಇರುವುದು ದೃಢಪಟ್ಟಿದೆ.

ಒಟ್ಟು ಸೋಂಕಿತರ ಸಂಖ್ಯೆ 762ಕ್ಕೇರಿದೆ. ಖಾಸಗಿ ಆಸ್ಪತ್ರೆಗಳಲ್ಲಿ 19 ಜನರು ಸೇರಿದಂತೆ ಒಟ್ಟು 432 ಜನರು ವಿವಿಧ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಗಾರ್ಮೆಂಟ್‌ನಲ್ಲಿಕಾರ್ಯನಿರ್ವಹಿಸುತ್ತಿದ್ದ ಮಿಳಘಟ್ಟದ ಮೂರನೇ ತಿರುವಿನ 31 ವರ್ಷದ ವ್ಯಕ್ತಿಗೆ ಕೊರೋನ ಪಾಸಿಟಿವ್ ಕಂಡುಬಂದಿದೆ. ಬಾಪೂಜಿ ನಗರದ ವಸತಿ ನಿಲಯದ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ 31 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ. ನವುಲೆಕೃಷಿಕಾಲೇಜಿನಸಿಬ್ಬಂದಿಯೊಬ್ಬರಲ್ಲೂಸೋಂಕು ಪತ್ತೆಯಾಗಿದೆ.

236 ಕಂಟೈನ್ಮೆಂಟ್ ಜೋನ್‌:

ಜಿಲ್ಲೆಯಲ್ಲಿಸೋಂಕಿತರು ಪತ್ತೆಯಾದ ಪ್ರದೇಶಗಳಲ್ಲಿ ಒಟ್ಟು 236 ಕಂಟೈನ್ಮೆಂಟ್‌ ಜೋನ್‌ಳನ್ನು ಮಾಡಲಾಗಿದೆ. 34 ಜೀನ್‌ಗಳನ್ನು ತೆರವುಗೊಳಿಸಲಾಗಿದೆ. ಶಿವಮೊಗ್ಗ ನಗರದಮಾರ್ನಮಿ ಬೈಲಿನ ಎರಡನೆ ತಿರುವು, ಸ್ವಾಮಿ ವಿವೇಕಾನಂದ ಬಡಾವಣೆ, ರಾಗಿಗುಡ್ಡದ ಶಾಂತಿ ನಗರದ ಆರನೇ ತಿರುವು, ವಾದಿ ಎ ಹುದಾ ಬಡಾವಣೆಯ ಮೂರನೇ ಮುಖ್ಯ ರಸ್ತೆ, ಎರಡನೇ ಅಡ್ಡ ರಸ್ತೆ, ಭಾರತಿ ಕಾಲೊನಿ ಎರಡನೇ ಮುಖ್ಯ ರಸ್ತೆ ನಾಲ್ಕನೇತಿರುವು, ಮಿಳಘಟ್ಟದ ಮೂರನೇ ತಿರುವು, ಟ್ಯಾಂಕ್ ಮೊಹಲ್ಲಾ ಆರನೇ ತಿರುವು, ಮಲ್ಲಿಗೇನ ಹಳ್ಳಿಯ ಚರ್ಚ್ ಬಳಿ, ಗೋಪಾಳದ ಕೊರಮರ ಕೇರಿಯ ಮಾರಿಕಾಂಬ ದೇವಸ್ಥಾನ ಬಳಿ, ಹರಿಗೆ ಐದನೇ ತಿರುವು, ಸಿದ್ದೇಶ್ವರ ನಗರ ಮೂರನೇ ತಿರುವು, ಬಸವನಗುಡಿಯ ನಾಲ್ಕನೇ ತಿರುವು, ಶರಾವತಿ ನಗರ ಒಂದನೇ ತಿರುವು, ವಿನೋಬನಗರದ 60 ಅಡಿ ರಸ್ತೆಯ 12ನೇ ತಿರುವು, ವೆಂಕಟೇಶ್ವರ ನಗರದ ನಾಲ್ಕನೇ ತಿರುವು. ಅಶೋಕ ರಸ್ತೆಯ ಬೇಡರ ಕೇರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ನಾಲ್ಕು ಪಾಸಿಟಿವ್ ಪ್ರಕರಣ(ಭದ್ರಾವತಿ ವರದಿ):

ನಗರದಲ್ಲಿ ಶುಕ್ರವಾರ ನಾಲ್ಕು ಕೊರೊನಾಪ್ರಕರಣಗಳು ವರದಿಯಾಗಿವೆ.ಉಡುಪಿಯಿಂದ ಬಂದಿದ್ದ ಬಸ್‌ಡಿಪೊಹಿಂಭಾಗದ49ವರ್ಷದ ಪುರುಷ, ಶೀತ, ಕೆಮ್ಮು ಕಾಣಿಸಿಕೊಂಡಿದ್ದಅಣ್ಣಾನಗರದ65 ವರ್ಷದ ವೃದ್ಧ, ಸೀಗೆಬಾಗಿಯ27 ವರ್ಷದ ಯುವಕ, ದೇವರ ನರಸಿಪುರದ39 ವರ್ಷದ ಪರುಷಲ್ಲಿ ಸೋಂಕು ದೃಢಪಟ್ಟಿದೆ.

ಒಂದೇ ಕುಟುಂಬದ ಮೂವರಿಗೆ ಸೋಂಕು (ಸಾಗರ ವರದಿ):ಸಾಗರ:ತಾಲ್ಲೂಕಿನ ಆನಂದಪುರಂನಲ್ಲಿ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ಶುಕ್ರವಾರ ಧೃಡಪಟ್ಟಿದೆ .35 ವರ್ಷದ ಪುರುಷ ,30 ವರ್ಷದ ಮಹಿಳೆ 7 ವರ್ಷದ ಬಾಲಕ ಸೋಂಕಿತರು.

ನಗರದ ಗುಲಾಮೊಹಿದ್ದೀನ್ ರಸ್ತೆಯ 60 ವರ್ಷದ ಮಹಿಳೆಗೂಸೋಂಕು ಧೃಡಪಟ್ಟಿದೆ.ತಾಲ್ಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 40ಕ್ಕೆ ಏರಿದೆ.17 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.